ಬಂಟ್ವಾಳ: ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಅಕ್ರಮ ಗೋಸಾಗಾಟ,ಗೋಹತ್ಯೆ ಅಕ್ರಮ ಗೋಸಾಗಾಟ,ಗೋಹತ್ಯೆ ನಡೆಯುವ ಸಾಧ್ಯತೆ ಇದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ವಿಹಿಂಪ,ಭಜರಂಗದಳ ಬಂಟ್ವಾಳ ಪ್ರಖಂಡ ಮನವಿ ಮಾಡಿದೆ.
ವಿಹಿಂಪ ಜಿಲ್ಲಾ ಪ್ರಮುಖ ಸರಪಾಡಿ ಆಶೋಕ್ ಶೆಟ್ಟಿ ಅವರ ನೇತೃತ್ವದ ನಿಯೋಗ ಗುರುವಾರ ಬಂಟ್ವಾಳ ತಹಶೀಲ್ದಾರ್ ಹಾಗೂ ಬಂಟ್ವಾಳ ಉಪವಿಭಾಗದ ಪೊಲೀಸ್ ಡಿವೈಎಸ್ಪಿಯವರ ಮೂಲಕ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.ಜು.30 ರಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತಿರುವುದರಿಂದ ಗೋವುಗಳನ್ನು ಕಳವುಗೈದು ಅಕ್ರಮವಾಗಿ ಗೋಸಾಗಾಟ ಮತ್ತು ಅಲ್ಲಲ್ಲಿ ಗೋವಧಾ ಕೇಂದ್ರ ಕಾರ್ಯಾಚರಿಸುವ ಸಾಧ್ಯತೆ ಇದೆ.
ಈ ಸಂದರ್ಭ ಹಿಂದೂ ಸಂಘಟನೆ ಅಥವಾ ಸಾರ್ವಜನಿಕರ ಗಮನಕ್ಕೆ ಬಂದು ಆಕ್ರೋಶವ್ಯಕ್ತವಾಗಿ ಪ್ರತಿಭಟನೆ ವ್ಯಕ್ತವಾಗುಬಹುದು ಹಾಗಾಗಿ ಜಿಲ್ಲಾಡಳಿತ,ಜಿಲ್ಲಾ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ತಕ್ಷಣದಿಂದಲೇ ಕಟ್ಟುನಿಟ್ಟಿನ ಕಾನೂನುಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಲಾಗಿದೆ.ನಿಯೋಗದಲ್ಲಿ ವಿಹಿಂಪ,ಭಜರಂಗದಲಕ ಪ್ರಮುಖರಾದ ಶಿವಪ್ರಸಾದ್ ತುಂಬೆ,ಸಂತೋಷ್ ಕುಲಾಲ್,ಯಶೋಧರ,ಅಭಿನ್ ರೈ,ಗುರುರಾಜ್ ಬಂಟ್ವಾಳ,ಭರತ್ ಕುಮ್ಡೇಲುರವರು ಉಪಸ್ಥಿತರಿದ್ದರು.
