ಬಂಟ್ವಾಳ: ರಾಜ್ಯ  ಸಕಾ೯ರವು ಮಾಲಕರ ಲಾಬಿಗೆ ಮಣಿದು ಕಾಮಿ೯ಕರಿಗೆ ನ್ಯಾಯ ಸಮ್ಮತವಾಗಿ 2020 ಎ.1ರಿಂದ ಸಿಗಬೇಕಿದ್ದ ವ್ಯತ್ಯಸ್ಥ ತುಟ್ಟಿ ಭತ್ಯೆಯನ್ನು (ವಿಡಿಎ)  ಒಂದು ವಷ೯ ಮುಂದೂಡಿರುವುದನ್ನು ಸಿಪಿಐ(ಎಂ) ಪಕ್ಷ  ಬಂಟ್ವಾಳ ತಾಲೂಕು ಸಮಿತಿ ಖಂಡಿಸಿದೆ.

ಕೋವಿಡ್ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾಮಿ೯ಕರಿಗೆ ಪರಿಹಾರವನ್ನು ಒದಗಿಸುವ ಮತ್ತು ಲಾಕ್ಡೌನ್ ಕಾಲಾವಧಿಯ ವೇತನ ಕೊಡಿಸಲು ಕ್ರಮ ವಹಿಸಿಬೇಕಾಗಿದ್ದ ರಾಜ್ಯ ಸಕಾ೯ರವು ಇದೀಗ ಕಾಮಿ೯ಕರಿಗೆ ಕನಿಷ್ಠ ವೇತನ ಕಾಯ್ದೆ ಅನುಸಾರ ಸಿಗಬೇಕಿರುವ ವಿಡಿಎ ಅನ್ನು ಒಂದು ವಷ೯ ಮುಂದೂಡಿ ರಾಜ್ಯದ ಕಾಮಿ೯ಕರಿಗೆ ದ್ರೋಹ ಎಸೆಗಿದೆ ಎಂದು ಸಿಪಿಐ (ಎಂ) ನ ತಾಲೂಕು ಸಮಿತಿಯ ಕಾರ್ಯದರ್ಶಿ ರಾಮಣ್ಣ ವಿಟ್ಲ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ರಾಜ್ಯದ ೮೦ ಶೇ. ಕಾಮಿ೯ಕರಿಗೆ ಮಾಲೀಕರು ಲಾಕ್ಡೌನ್ ಕಾಲಾವಧಿಯ ವೇತನ ನೀಡಿಲ್ಲ. ೭೦ ಶೇ.ಕಾಮಿ೯ಕರನ್ನು ಕೆಲಸದಿಂದ ತೆಗೆದಿರುವ ಮಾಲೀಕರಿಗೆ ಇಂತಹ ಉಡುಗೊರೆ ನೀಡಿರುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ‌.

By suddi9

Leave a Reply

Your email address will not be published. Required fields are marked *