ಬಂಟ್ವಾಳ: ಉದ್ಯೋಗ ಖಾತರಿ ಯೋಜನೆಯಲ್ಲಿ ಯಾವುದೇ ಕೆಲಸಗಳನ್ನು ಮಾಡಲು ಅಧಿಕಾರಿಗಳು ಬಿಡುತ್ತಿಲ್ಲ, ಈ ಬಾರಿ ಬಾವಿಯನ್ನು ಮಾಡಲು ಹೇಳಿದ್ದು ಬವಿ ಮಾಡಿದವರು ಬಾವಿಯೋಳಗೆ ಬಿದ್ದು ಸಾಯುವ ಕಾಲ ಬಂದಿದೆ. ಈವರಗೆ ಯಾರಿಗೂ ಹಣವೇ ನೀಡಿಲ್ಲ ಎಂದು ಸದಸ್ಯರು ಅಧಿಕಾರಿಗಳ ವಿರುದ್ದ ಕಿಡಿಕಾರಿದರು. ಬಂಟ್ವಾಳ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಯಶವಂತ ಡಿ.ಅವರು ಅಧ್ಯಕ್ಷತೆಯಲ್ಲಿ ನೆಡದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ಪ್ರಸ್ತಾಪ ಮಾಡಿದರು. ಸರಕಾರದ ಯಾವುದೇ ಯೋನಜೆಗಳ ಸರಿಯಾದ ಮಾಹಿತಿ ಇಲ್ಲದ ಅಧಿಕಾರಿಗಳು ಸಾರ್ವಜನಿಕರನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದರು.

ಅಂಬೇಡ್ಕರ್ ಭವನದ ವಿಷಯದಲ್ಲಿ ಗಂಟೆಗಟ್ಟಲೆ ಕಾಲಹರಣ ಚಚರ್ೆ ಬೇಡ, ಸಂಬಂದಪಟ್ಟ ಅಧಿಕಾರಿ ತಹಶೀಲ್ದಾರ್ ಅವರ ಆಗಮನದ ನಂತರ ಚಚರ್ೆ ಮಾಡುವ ನನಗೆ ಸಮಯವಿಲ್ಲ ಬೇರೆ ಅಭಿವೃದ್ದಿ ವಿಷಯವಿದ್ದರೆ ಚಚರ್ೆ ಮಾಡಿ ಎಂದು ಪ್ರತಿಪಕ್ಷದ ಸದಸ್ಯರೊರ್ವರು ಹೇಳಿದಾಗ ವಿರೋದ ಪಕ್ಷದ ಸದಸ್ಯರು ಇದು ತಾಲೂಕಿನಲ್ಲಿ ಜನಪ್ರತಿನಿಧಿಗಳ ಕಾಳಜಿಯ ವಿಷಯವಾಗಿದ್ದು ಅಂಬೇಡ್ಕರ್ ಭವನದ ಬಗ್ಗೆ ಸೂಕ್ತ ಜಾಗ ಗುರುತಿಸಿ ಬೇಕಾದ ವ್ಯವಸ್ಥೆಯನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ, ಇದು ಸದಸ್ಯರ ಸಮಯವನ್ನು ಪೋಲು ಮಾಡುವುದಾದರೆ ಅವರು ಸಭೆಗೆ ಬರುವುದು ಯಾಕೆ ? ಎಂದು ಪ್ರಶ್ನೆ ಮಾಡಿದರು. ಇದನ್ನು ವಿರೋಧಿಸಿದ ಜಿಲ್ಲಾ ಪಂ.ಸದಸ್ಯರೊರ್ವರು ತಾಪಂ.ಸದಸ್ಯರನ್ನು ಸಭೆಯಿಂದ ಹೊರಗೆ ಹೋಗಿ ಎಂದು ಹೇಳುವುದು ಸರಿಯಲ್ಲ, ಹೊರನಡೆಯಲು ಹೇಳಲು ನೀವು ಯಾರು ಎಂದು ಕೇಳಿದರು, ಅಲ್ಲದೆ ಇಬ್ಬರು ಸದಸ್ಯರು ಡೆಸ್ಕ್ನ್ನು ಬಡಿಯುವ ಮೂಲಕ ತಮ್ಮ ಶಕ್ತಿಯನ್ನು ಸಭೆಯ ಅಧ್ಯಕ್ಷರ ಎದುರು ಪ್ರದಶರ್ಿಸಿದರು. ಅಂತೂ ಸಭೆಯ ಮುಕ್ಕಾಲು ಭಾಗ ಅನಗತ್ಯ ಚಚರ್ೆಗೆ ಸಮಯ ಕಾಲವ್ಯಯವಾಯಿತು.
ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ 35 ಸೆಂಟ್ಸ್ ಜಾಗವನ್ನು ಪಾಲು ಮಾಡಿ ಕೊಡುವುದು ನಂತರ ಅವರು ಅಂಬೇಡ್ಕರ್ ಭವನ ಮತ್ತು ಪಂಜೆ ಮಂಗೇಶ್ ರಾಯರ ಭವನ ಮಾಡುವುದಕ್ಕೆ ವ್ಯವಸ್ಥೆಯನ್ನು ಕಲ್ಪಿಸುವುದು ಎಂದು ತಹಶೀಲ್ದಾರ್ ಮಲ್ಲೇಸ್ವಾಮಿ ಸಭೆಯಲ್ಲಿ ತಿಳಿಸಿದರು.
ಅರಣ್ಯ ಇಲಾಖೆಯ ಒಳೊಪ್ಪಂದದಿಂದ ಬಂಟ್ವಾಳದಲ್ಲಿ ಉತ್ತಮ ಜಾತಿಯ ಮರಗಳು ಅಕ್ರಮವಾಗಿ ಸಾಗಾಟವಾಗುತ್ತಿದ್ದು ಅದನ್ನು ಕದ್ದು ಕಡಿಯಲು ಇವರಿಗೆ ಯಾರ ಪಮರ್ಿಸನ್ ಬೇಡ, ಆದರೆ ಹಳೇ ತಾ.ಪಂ.ಕಟ್ಟಡದಲ್ಲಿ ತಾಗಿ ಕೊಂಡು ಇರುವ ಮತ್ತು ಸಾಕಷ್ಟು ತೊಂದರೆ ಆಗುತ್ತಿದೆ ಎಂದು ತಾ.ಪಂ.ನ ವತಿಯಿಂದ ಅರಣ್ಯ ಇಲಾಖೆಗೆ ಮನವಿ ನೀಡಲಾಗಿತ್ತು. ಮನವಿ ನೀಡಿ ಎರಡು ಸಾಮಾನ್ಯ ಸಭೆ ಕಳೆದರು ಮರ ಅಥವಾ ಕನಿಷ್ಟ ಮರದ ಗೆಲ್ಲು ಕಡಿಯುವ ಕೆಲಸ ಕೂಡಾ ಇವರಿಂದ ಆಗಿಲ್ಲ, ಹಾಗಾದರೆ ಸಾಮಾನ್ಯ ಸಭೆ ಇವರಿಗೆ ಸಮಾನ್ಯವಾಗಿ ಬಿಟ್ಟಿತೇ ಎಂದು ತಾ.ಪಂ.ಸದಸ್ಯ ಆನಂದ ಶಂಭೂರು ಪ್ರಶ್ನಿಸಿದರು.
ಇನ್ನು ಮುಂದೆ ತಾಲೂಕಿನಲ್ಲಿ ನಡೆಯುವ ಯಾವುದೇ ಸರಕಾರಿ ಕಾರ್ಯಕ್ರಮಗಳು ಪ್ರೋಟೋಕಾಲ್ ಪ್ರಕಾರವೇ ನಡೆಯಬೇಕು, ಇಲ್ಲದಿದ್ದರೆ ಜನಪ್ರತಿನಿಧಿಗಳನ್ನು ಕಡೆಗಣಿಸಿದಂತಾಗುತ್ತದೆ ಎಂದು ಸದಸ್ಯರು ಹೇಳಿದರು. ಇತ್ತೀಚೆಗೆ ಸರಕಾರಿ ಕಾರ್ಯಕ್ರಮವೊಂದರಲ್ಲಿ ಜನಪ್ರತಿನಿಧಿಗಳನ್ನು ಬಿಟ್ಟು ಅವರಿಗೆ ಕಡೆಗಣನೆ ಮಾಡಲಾಗಿತ್ತು ಎಂದು ಆರೋಪದ ಹಿನ್ನಲೆಯಲ್ಲಿ ಈ ನಿರ್ಣಯ ಮಾಡಲಾಯಿತು




