ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜು.19 ಬೆಳಿಗ್ಗೆ 6 ಗಂಟೆಯಿಂದ ಜು.21ಬೆಳಿಗ್ಗೆ 9 ಗಂಟೆಯವರೆಗೆ ದೇವರ ದರ್ಶನ ಮತ್ತು ಆಟಿ ಅಮಾವಾಸ್ಯೆಯ ಪ್ರಯುಕ್ತ ತೀರ್ಥ ಸ್ನಾನವನ್ನು ನಿಷೇಧಿಸಲಾಗಿದೆ ಎಂದು ದೇವಳದ ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವಳದ ಅರ್ಚಕರು,ಗ್ರಾಮಣಿಗಳು ಹಾಗೂ ಗ್ರಾಮಸ್ಥರು ಸೇರಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಕೊರೋನ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು,ಸಾಮಾಜಿಕ ಅಂತರವನ್ನು ಕಾಯ್ದಯಕೊಳ್ಳುವುದು ಕಷ್ಡಸಾಧ್ಯವಾದ ಹಿನ್ನಲೆಯಲ್ಲಿ ಆಟಿಅಮಾವಸ್ಯೆಯಂದು ತೀರ್ಥಸ್ನಾನ ನಿಷೇಧ ಅನೀವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ದೇವಳದ ಪ್ರಧಾನ ಅರ್ಚಕ ಮಿಥುನ್ ಭಟ್,ಗ್ರಾಮಣಿ ಗಣಪತಿ ಮುಚ್ಚಿನ್ನಾಯ,ಕಾವಳಮೂಡೂರು ಪಂಚಾಯತ್ ಪಿಡಿಒ ಧನಂಜಯ,ಸ್ಥಳೀಯ ಪ್ರಮುಖರಾದ ಶಿವಪ್ಪಗೌಡ ನಿನ್ನಿಕಲ್ಲು,ಪ್ರಮೋದ್ ಕುಮಾರ್ ರೈ,ರಾಜಾರಾಮ ನಾಯಕ್,ಸದಾಶಿವ ಪ್ರಭು,ಮೋಹನ ಆಚಾರ್ಯ,ಹೇಮಂತ್ ಕುಮಾರ್,ಪ್ರವೀಣ್ ಕುಮಾರ್,ಜಗನ್ನಾಥ ಶೆಟ್ಟಿ,ದೇವಳದ ಮೆನೇಜರ್ ಸತೀಶ್ ಪ್ರಭು ಮೊದಲಾದವರಿದ್ದರು.
