ಕೈಕಂಬ:ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದೆ ಬರುವ ತನ್ನ ಪ್ರಯತ್ನಗಳ ಅಂಗವಾಗಿ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‍ಜೆಇಸಿ) 100ಕ್ಕೂ ಹೆಚ್ಚು ಆಹಾರ ಕಿಟ್‍ಗಳನ್ನು ಗ್ರಾಮಸ್ಥರಿಗೆ ವಿತರಿಸಲು ಮಲ್ಲೂರು ಗ್ರಾಮ ಪಂಚಾಯತ್ ಪ್ರತಿನಿಧಿಗಳಿಗೆ ನೀಡಿತು.

3

ಮಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಮತ್ತು ಇತರ ಅಧಿಕಾರಿಗಳು ಆಹಾರ ಕಿಟ್‍ಗಳನ್ನು ಮಲ್ಲೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸ್ವೀಕರಿಸಿದರು. ನೆರೆಹೊರೆಯ ಬಡ ಕುಟುಂಬಗಳ ಅಗತ್ಯತೆಗಳನ್ನು ಪೂರೈಸುವಲ್ಲಿ ಈ ಕಿಟ್‍ಗಳು ಬಹಳ ಉಪಯುಕ್ತ ಎಂದು ಹೇಳಿದ ಮಲ್ಲೂರಿನ ಪ್ರತಿನಿಧಿಗಳು ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದೆ ಬಂದ ಕಾಲೇಜಿನ ಆಡಳಿತಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಅಗತ್ಯವಿರುವ ಸಮಯದಲ್ಲಿ ಸ್ಥಳೀಯ ಸಮುದಾಯದ ಅವಶ್ಯಕತೆಗಳಿಗೆ ಧಾವಿಸಲು ಸದಾ ಮುಂಚೂಣಿಯಲ್ಲಿರುವ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ತನ್ನ ಶೈಕ್ಷಣಿಕ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಮಲ್ಲೂರು ಸೇರಿದಂತೆ ಹಳ್ಳಿಗಳನ್ನು ದತ್ತು ಪಡಕೊಂಡಿದೆ ಮತ್ತು ತಾನು ದತ್ತು ಪಡೆದ ಪ್ರತಿಯೊಂದು ಗ್ರಾಮಗಳಿಗೆ ಸಮಯೋಚಿತ ಸಹಾಯವನ್ನು ಸಕ್ರಿಯವಾಗಿ ನೀಡುತ್ತಾ ಬಂದಿದೆ.

By suddi9

Leave a Reply

Your email address will not be published. Required fields are marked *