ಬಂಟ್ವಾಳ: ಶಿವಾಜಿ ಬಳಗ (ರಿ.) ಶ್ರೀ ರಾಮ ನಗರ ಮಧ್ವ ಮತ್ತು ಶಿವಾಜಿ ಮಾತೃ ಬಳಗದ ವತಿಯಿಂದ ಯೋಧರಿಗೆ ನಮನ, ಕೋರೋನಾ ಜಾಗೃತಿ,ಸಸಿ ವಿತರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ ಮಧ್ವ ಕೊಡಮಣಿತ್ತಾಯಿ ದೈವಸ್ಥಾನದ ಬಳಿ ನಡೆಯಿತು.

ಕಾವಳಪಡೂರು ಗ್ರಾಪಂ ಪಿಡಿಒ ಶ್ರೀಧರ್, ದಿನೇಶ್ ಬಡೆಕೊಟ್ಟು,ಶಿವಾಜಿ ಬಳಗದ ಅಧ್ಯಕ್ಷ ಯದುಷ್ ಮಧ್ವ, ಗೌರವಧ್ಯಕ್ಷ ಪ್ರಕಾಶ್ ಮಧ್ವ, ಶಿವಾಜಿ ಮಾತೃ ಬಳಗದ ಉಪಾಧ್ಯಕ್ಷೆ ವಸಂತಿರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇಲ್ಲಿನ ಕೊರೊನಾ ವಾರಿಯರ್ಸ್ ರನ್ನು ಗೌರವಿಸಲಾಯತು.ಶಿವಾಜಿ ಬಳಗದ ಸ್ಥಾಪನಾಧ್ಯಕ್ಷ ನಾಗೇಶ್ ಮಧ್ವ ಪ್ರಸ್ತಾವನೆಗೈದರು.ಪ್ರಧಾನ ಕಾರ್ಯದರ್ಶಿ ಧನುಷ್ ಮಧ್ವ ಸ್ವಾಗತಿಸಿದರು. ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.
