ಬಂಟ್ವಾಳ: ಈ ಕಾಲಘಟ್ಟದಲ್ಲಿ ಕೃಷಿ ಚಟುವಟಿಕೆಯಿಂದ ವಿಮುಖವಾಗುತ್ತಿರುವ ಯುವ ಸಮುದಾಯ ಇದೀಗ ಮನೆಯ ಹಿರಿಯರ ಜೊತೆ ಗದ್ದೆಗೆ ಇಳಿದು ಕೃಷಿಕಾಯಕದಲ್ಲಿ ತೊಡಗಿಸುತ್ತಿರುವುದು ಕಂಡು ಬರುತ್ತಿದೆ. ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದನೂರ್ತಾಡಿಗುತ್ತಿನ ಮನೆಯ ಸುಮಾರು ಮೂರುವರೆ ಎಕ್ರೆ ಕೃಷಿ ಭೂಮಿಯಲ್ಲಿ ಹತ್ತಾರು ಯುವಕರ ತಂಡ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಉಳುಮೆಗೂ ಯಂತ್ರವನ್ನೇ ಬಳಸುವ ಈ ಸಂದರ್ಭದಲ್ಲಿ ಈ ಯುವಕರು ಕೋಣಗಳನ್ನು ಕಟ್ಟಿ ಉಳಮೆ ಮಾಡುವುದು,ಗದ್ದೆಯನ್ನು ಹದ ಮಾಡುವುದು,ಪೈರು ನೆಡುವಂತ ದೃಶ್ಯಕಂಡು ಬಂದಿದ್ದು,ಸಾಮಾಜಿಕ ಜಾಲತಾಣದಲ್ಲು ಈ ಯುವಕರ ಕೃಷಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಇದಕ್ಕೆಲ್ಲಾ ಕಾರಣವಾಗಿದ್ದು ಕೊರೋನಾ: ಈ ಯುವಕರಲ್ಲಿ ಕೃಷಿಯ ಬಗ್ಗೆ ಅಷ್ಟಕ್ಕು ಒಲವು ಮೂಡಲು ಕಾರಣವಾದದ್ದು ಕೊರೋನಾ ಎಂಬ ಮಹಾಮಾರಿ, ಈ ಯುವಕರಲ್ಲಿ ಹಿರಿಯರ ಕಾಲದಿಂದಲೂ ಸಾಕಷ್ಟು ಕೃಷಿಭೂಮಿ ಇದ್ದರೂ ತಮ್ಮ ಬದುಕು ಸಾಗಿಸಲು ಹಳ್ಳಿಯಿಂದ ಬೆಂಗಳೂರು,ಮಂಗಳೂರು ನಗರ ಪ್ರದೇಶದತ್ತ ಮುಖಮಾಡಿದ್ದರು.
ಕೆಲವರು ಮುಂಬೈ,ವಿದೇಶದಲ್ಲೋ ಇದ್ದು ,ತಮ್ಮದೇ ಆದ ಬದುಕನ್ನು ಕಟ್ಟಿಕೊಂಡಿದ್ದರು.ಇನ್ನು ಕೆಲವರುಕೂಲಿ,ಸೆಂಟ್ರಿಂಗ್,ಕಟ್ಟಡ ಗುತ್ತಿಗೆ ಅಂತ ಸ್ವಂತ ಉದ್ಯಮದಲ್ಲಿ ತೊಡಗಿಸಿದ್ದರು. ಆದ್ಯಾವಾಗ ಈ ಜಗತ್ತಿಗೆ ಕೊರೋನಾ ಮಹಾಮಾರಿ ವಕ್ಕರಿಸಿತೋ ಅಂದಿಗೆ ಯುವಕರ ಉದ್ಯೋಗಕ್ಕೆ ಕುತ್ತು ಬಂದಿದೆ. ಸದ್ಯ ನಗರ ಪ್ರದೇಶದಲ್ಲಿ ಕೆಲಸವಿಲ್ಲ,ಇದ್ದ ಕೆಲಸದವರನ್ನು ನಯವಾಗಿ ಮನೆಗೆ ಕಳಿಸಲಾಗುತ್ತಿದೆ.ಕೆಲವರಿಗೆ ಕೆಲಸ ಇದ್ದರೂ ಹೋಗುವ ಪರಿಸ್ಥಿತಿಯಲ್ಲಿಲ್ಲ, ಹಾಗಾಗಿ ಹಳ್ಳಿಯ ಯುವಕರು ಮತ್ತೆ ಕೃಷಿಯತ್ತ ಒಲವು ತೋರಿದ್ದಾರೆ.ತಮ್ಮ ಮುಂದಿನ ಜೀವನಾಧಾರಕ್ಕೆ ಕೃಷಿಯನ್ನೇ ನಂಬಿ ಗದ್ದೆಗೆ ಇಳಿದಿದ್ದಾರೆ.ಇದೀಗ ಈ ಯುವಕರು ನೈಜ ರೈತನ ಮಕ್ಕಳಾಗಿ ಗದ್ದೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಯುವಕರಲ್ಲಿ ಕೃಷಿ ಆಸಕ್ತಿ ಅಭಿನಂದನೀಯ: ಸುಮಾರು ಮೂರುವರೆ ಎಕರೆ ಗದ್ದೆಯನ್ನು ನಮ್ಮ ಮನೆಯ ಮತ್ತು ಅಸುಪಾಸಿನ ಹತ್ತಾರು ಯುವಕರು ಕೋಣಗಳನ್ನು ಕಟ್ಟಿ ಉಳುಮೆ ಮಾಡಿ,ಪೈರು ನೆಟ್ಟಿದ್ದಾರೆ.ಒಂದುವಾರಗಳ ಕಾಲ ಈ ಯುವಕರು ಕೃಷಿ ಕಾರ್ಯದಲ್ಲಿ ತೊಡಗಿಸಿದ್ದಾರೆ.ಈ ಯುವಕರ ಪೈಕಿ ಕೆಲವರು,ಬೆಂಗಳೂರು,ಮಂಗಳೂರಿನಲ್ಲಿ ನೌಕರಿಯಲ್ಲಿದ್ದರು.ಕೊರೋನದಂತ ಮಹಾಮಾರಿಯಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಊರಿನಲ್ಲಿಯೇ ಇದ್ದು , ಆಸಕ್ತಿಯಿಂದ ಕೃಷಿ ಕೆಲಸದಲ್ಲಿ ಕೈ ಜೋಡಿಸಿದ್ದಾರೆ.ಕೃಷಿಯ ಬಗ್ಗೆ ಯುವಕರಿಗಿದ್ದ ಆಸಕ್ತಿಅದ್ಬುತವಾದದ್ದು,ಯಂತ್ರವನ್ನು ಬಳಸಿ ಉಳುಮೆ ಮಾಡುವ ಈ ದಿನದಲ್ಲಿ ಯುವಕರು ಕೋಣಗಳನ್ನು ಬಳಸಿಕೊಂಡು ಉಳುಮೆ ಮಾಡುವ ಮೂಲಕ ಹಿಂದಿನ ಕೃಷಿ ಸಂಸ್ಖೃತಿಯನ್ನು ನೆನಪಿಸಿರುವುದು ಅಭಿನಂದನೀಯ.
ಚಂದ್ರಶೇಖರ ನೂರ್ತಾಡಿ

