ಬಂಟ್ವಾಳ : ಧರ್ಮ ಜಾಗರಣಾ ಪ್ರತಿಷ್ಠಾನ (ರಿ), ಮಂಚಿ ಇರಾ ಇದರ ಆಡಳಿತಕ್ಕೊಳಪಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ  ನ.4  ಮಂಗಳವಾರ ಸೂರ್ಯೋದಯದಿಂದ ಎ. 4ರಂದು  ಸೂರ್ಯೊದಯದವರೆಗೆ ನಡೆಯಲಿರುವ ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಅಧ್ಯಕ್ಷರಾದ ಶ್ರೀ ಕೈಯೂರು ನಾರಾಯಣ ಭಟ್ ರವರು ಬಿಡುಗಡೆಗೊಳಿಸಿದರು .
IMG-45
ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ವೈದಿಕ ಕಾರ್ಯಕ್ರಮಗಳು ಮತ್ತು ಜಿಲ್ಲೆಯ ವಿವಿಧ ಕ್ಷೇತ್ರಗಳ ಸ್ವಾಮೀಜಿಯವರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಧಾಮರ್ಿಕ ಸಭೆ ಜರಗಲಿದೆ . ಹಿಂದೂ ಸಮಾಜದ ಸಂಘಟನೆ-ಸಂಸ್ಕಾರ-ಲೋಕ ಕಲ್ಯಾಣಾರ್ಥವಾಗಿ ಜರಗುವ ಪುಣ್ಯಪ್ರದವಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಆಸ್ತಿಕ ಬಂಧುಗಳೆಲ್ಲರೂ ಕೈಜೋಡಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು . ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿಗಳಾದ ಗಣೇಶ್ ಆಚಾರ್ಯ ಕುಕ್ಕಾಜೆ , ಸಿ.ಎಚ್.ಸೀತಾರಾಮ ಶೆಟ್ಟಿ , ಸಂಜೀವ ಸಾಲ್ಯಾನ್ ಕುಕ್ಕಾಜೆ ಬೈಲು , ಸತೀಶ್ ಕುಕ್ಕಾಜೆ ಬೈಲು , ರಮೇಶ್ ಪೂಜಾರಿ ಕುಕ್ಕಾಜೆ ಹಾಗೂ ಭಾಸ್ಕರ ಮದನಾಜೆ , ರವೀಂದ್ರ ಮದನಾಜೆ , ರವೀಂದ್ರ ಕುಕ್ಕಾಜೆ , ಚಂದ್ರಮೋಹನ ಕುಕ್ಕಾಜೆ , ಸಂಜೀತ್ ಪತ್ತುಮುಡಿ , ಸಂದೇಶ್ ಕುಕ್ಕಾಜೆ ಬೈಲು , ಉದಯ ಕುಕ್ಕಾಜೆ , ಸತೀಶ್ ಮದನಾಜೆ , ಜಗದೀಶ್ ಶೆಟ್ಟಿ ನೋಳ , ಶೇಖರ ಆಚಾರ್ಯ ಕುಕ್ಕಾಜೆ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *