ನೇತ್ರಾವತಿ ನದಿ ಬಾಳ್ತಿಲ ಗ್ರಾಮದಪಕ್ಕದಲ್ಲೇ ಹರಿಯುತ್ತಿದ್ದರೂ ಬಾಳ್ತಿಲ ಗ್ರಾಮದ ಕೃಷಿಕರಿಗೆ ನೀರಿನ ಅಭಾವದಿಂದಾಗಿ ಕೃಷಿ ಕಾರ್ಯ ಸಮರ್ಪಕವಾಗಿ ನಡೆಸಲು ಆಗುತ್ತಿಲ್ಲ. ಇದನ್ನು ಮನಗಂಡ ಗ್ರಾಮಸ್ಥರು ಡಾ| ಪ್ರಭಾಕರ ಭಟ್ ಇವರನ್ನು ಭೇಟಿ ಮಾಡಿ ಬಾಳ್ತಿಲ ಗ್ರಾಮಕ್ಕೆ ಏತ ನೀರಾವರಿ ಯೋಜನೆಯನ್ನು ಮಾಡಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ವಿನಂತಿಸಿದರು.

abhi1ಅದರಂತೆ ಶಾಸಕರಾದ ರಾಜೇಶ್ ನಾೈಕ್, ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ ಮತ್ತು ಪದ್ಮನಾಭ ಕೊಟ್ಟಾರಿ ಹಾಗೂ ಗ್ರಾಮಸ್ಥರ ಮನವಿಯೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

abhinಇದಕ್ಕೆ ಸ್ಪಂಧಿಸಿದ ಮುಖ್ಯಮಂತ್ರಿಗಳು ಅದಕ್ಕೆ ಬೇಕಾದ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶಿದರು. ಇದಕ್ಕೆ ಸಂತೋಷಪಟ್ಟ ಬಾಳ್ತಿಲ ಗ್ರಾಮಸ್ಥರು ಡಾ| ಪ್ರಭಾಕರ ಭಟ್ ಇವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಠಲ ನಾಯ್ಕ, ಸದಸ್ಯರಾದ ಆನಂದ ಶೆಟ್ಟಿ, ಪ್ರಮುಖರಾದ ಮೋಹನ ಪಿ.ಯಸ್., ಗೋಪಾಲ ಶೆಣೈ, ಪುಲಿಂಚ ಶ್ರೀಧರ ಶೆಟ್ಟಿ, ರಾಮಣ್ಣ ಶೆಟ್ಟಿ, ವೆಂಕಟ್ರಾಯ ಪ್ರಭು, ಶಾಂತರಾಮ ಶೆಣೈ, ಸಹಕಾರಿ ಸಂಘದ ನಿರ್ದೇಶಕರಾದ ಲೋಕನಾಥ ಏಳ್ತಿಮಾರ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *