ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕು, ಪಾಣೆಮಂಗಳೂರು ವಲಯ ಪ್ರಗತಿ ಬಂಧು ಸ್ವ ಸಹಾಯ ಸಂಘ ಅಮ್ಟೂರುಇದರ ಸಹಯೋಗದೊಂದಿಗೆ ಪರಿಸರಜಾಗೃತಿ ಮಾಹಿತಿ ಮತ್ತುಗಿಡ ನಾಟಿಕಾರ್ಯಕ್ರಮವು ಶ್ರೀಕೃಷ್ಣ ಮಂದಿರಅಮ್ಟೂರುಇಲ್ಲಿಒಕ್ಕೂಟದ ಅಧ್ಯಕ್ಷರಾದ ಚಿತ್ರವತಿ ಇವರಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಗತಿ ಬಂಧುಒಕ್ಕೂಟದಮಾಜಿಅಧ್ಯಕ್ಷರಾದಜಯಂತಕಟ್ಟೆಮಾರ್‍ಇವರು ಮಂದಿರದ ಮುಂಭಾಗದಲ್ಲಿ ಸಂಪಿಗೆಯಗಿಡ ನೆಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿಕೊರೋನಾದಜಾಗೃತಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿಎಲ್ಲರಿಗೆ ಗಿಡಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾಲಕರಾದಜನಾರ್ದನ, ವಲಯದ ಮೇಲ್ವಿಚಾಲಕರಾದಅಮಿತಾ, ವಿಭಾಗದ ಸೇವಾಪ್ರತಿನಿಧಿ ವನಿತಾ, ಶ್ರೀಕೃಷ್ಣ ಮಂದಿರದ ಲೆಕ್ಕಪರಿಶೋಧಕರಾದ ಕುಶಾಲಪ್ಪಅಮ್ಟೂರು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರಾದ ಪ್ರವೀಣ್ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀದೇವಿ ಸಂಘದ ಬಬಿತಾ ಸ್ವಾಗತಿಸಿ, ವಸಂತ ಪೂವಳ ನಿರೂಪಿಸಿ ಧನ್ಯವಾದ ಮಾಡಿದರು.
