ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ 107ನೇ ರಕ್ತದಾನ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಭವನದಲ್ಲಿ ಭಾನುವಾರ ನಡೆಯಿತು.

BTW_JUNE28_1
ಬಂಟ್ವಾಳ ಗ್ರಾಮಾಂತರ ಠಾಣಾ ಎಸೈ ಪ್ರಸನ್ನ ಅವರು ರಕ್ತದಾನ ಶಿಬಿರ ಉದ್ಘಾಟಿಸಿದರು. ಅವರು ಮಾತನಾಡಿ ಸೇವಾಂಜಲಿಯ ಸೇವಾ ಕಾರ್ಯಕ್ರಮದೊಂದಿಗೆ ಪೆÇಲೀಸ್ ಇಲಾಖೆ ನಿರಂತರವಾಗಿ ಕೈ ಜೋಡಿಸುತ್ತಿದೆ. ಸೇವಾಂಜಲಿ ಪ್ರತಿಷ್ಠಾನ ನಿರಂತರವಾಗಿ ರಕ್ತದಾನ ಶಿಬಿರ ನಡೆಸುತ್ತಿದ್ದು ಒಮ್ಮೆ ರಕ್ತದಾನ ಮಾಡುವುದರಿಂದ ಮೂರು ಮಂದಿಯ ಪ್ರಾಣ ಉಳಿಸಲು ಸಾಧ್ಯವಿದೆ ಎಂದರು. ಬಳಿಕ ಅವರು ಸ್ವತಃ ರಕ್ತದಾನ ಮಾಡಿ ಯುವಕರಲ್ಲಿ ಸ್ಪೂರ್ತಿ ತುಂಬಿದರು.

ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೋಡಾಜೆ ಮಾತನಾಡಿ ಕೃಷ್ಣ ಕುಮಾರ್ ಪೂಂಜಾ ಅವರ ನೇತೃತ್ವದಲ್ಲಿ ಸೇವಾಂಜಲಿ ಪ್ರತಿಷ್ಠಾನ ಹಲವಾರು ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದರಿಂದ ಹಲವು ಮಂದಿಯ ಜೀವನ ಬೆಳಕಾಗಿದೆ ಎಂದರು. ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ, ತಾ.ಪಂ.ಮಾಜಿ ಸದಸ್ಯ ಪ್ರವೀಣ್ ಆಳ್ವ, ತಾರಾನಾಥ ಕೊಟ್ಟಾರಿ ಪೊಲೀಸ್ ಸಿಬ್ಬಂದಿಗಳು ರಕ್ತದಾನ ಮಾಡಿದರು.

ವೇದಿಕೆಯಲ್ಲಿ ಕಳ್ಳಿಗೆ ಗ್ರಾ.ಪಂ. ಉಪಾಧ್ಯಕ್ಷ ಪುರುಷ ಸಾಲ್ಯಾನ್ ನೆತ್ರಕೆರೆ, ಪ್ರಮುಖರಾದ ಪುಂಚಮೆ ಪದ್ಮನಾಭ ಶೆಟ್ಟಿ, ಪ್ರಕಾಶ್ ಕಿದೆಬೆಟ್ಟು ಬಾಲಕೃಷ್ ರೈ ದೇವಸ್ಯ
ಎಂ.ಕೆ.ಖಾದರ್, ಜಯರಾಜ್ ಕರ್ಕೆರಾ ಮಂಟಮೆ, ಅರ್ಕುಳ ಸಾಜಿದ್ ಒಡೆಯರ್, ಬಿ.ನಾರಾಯಣ ಮೇರಮಜಲು, ಅರ್ಜುನ್ ಪೂಂಜಾ, ವಾಮದಪದವು ವ್ಯವಸಾಯ ಸಹಕಾರಿ ಸೊಸೈಟಿ ಅಧ್ಯಕ್ಷ ಕಮಲ್‍ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸೇವಾಂಜಲಿಯ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕೊಡ್ಮಾನ್ ದೇವದಾಸ್ ಶೆಟ್ಟಿ ವಂದಿಸಿದರು. ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಶಿಬರದಲ್ಲಿ ಒಟ್ಟು 78 ಯುನಿಟ್ ರಕ್ತ ಸಂಗ್ರಹಗೊಂಡಿತು.

ಚಿತ್ರ: ಬಂಟ್ವಾಳ ಗ್ರಾಮಾಂತರ ಠಾಣೆ ಎಸೈ ಪ್ರಸನ್ನ ರಕ್ತದಾನ ಮಾಡಿದರು. ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ, ಕಳ್ಳಿಗೆ ಗ್ರಾ.ಪಂ. ಉಪಾಧ್ಯಕ್ಷ ಪುರುಷ ಸಾಲ್ಯಾನ್ ನೆತ್ರಕೆರೆ, ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೋಡಾಜೆ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *