ಬಂಟ್ಟಾಳ: ಭಾರತ ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವಂತಹ ರಾಷ್ಟ್ರ. ಜಗತ್ತಿನ ಜನರಲ್ಲಿ ಅಂಧಕಾರವಿತ್ತು. ಆದರೆ ಭಾರತೀಯರು ಸುಸಂಸ್ಕೃತ ಜೀವನವನ್ನು ನಡೆಸಿದರು ಎಂದು ಯೋಗಾಚಾರ್ಯರು ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋದನ್ನ ಮಂಗಳೂರು ವಿಭಾಗದ ಸಹಪ್ರಮುಖರಾದ ಪುಂಡರೀಕಾಕ್ಷ ಹೇಳಿದರು.


ಕಲ್ಲಡ್ಕ ಶ್ರೀ ರಾಮ ಪದವಿಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 2ರಿಂದ ಆರಂಭಗೊಂಡ 5 ದಿನಗಳ ಕಾಲ ನಡೆದ ಬಾಲಿಕೆಯರ ರಾಷ್ಟ್ರೀಯ ಸಂಸ್ಕಾರ ಶಿಬಿರವಾದ ಉತ್ಥಾನದ ಸಮರೋಪವ ದೀಪಪೂಜನೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿ ದೀಪಪೂಜನ್ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ತಿಳಿಸಿಕೊಡುತ್ತದೆ.
ತುಪ್ಪದ ದೀಪವನ್ನು ಬೆಳಗುವುದರಿಂದ ಹೆಚ್ಚು ಆಮ್ಲಜನಕ ಬಿಡುಗಡೆಯಾಗಿ, ವಾತಾವರಣವು ಶುದ್ದವಾಗಿ ನಮ್ಮ ಬುದ್ದಿ ಸುದೃಢವಾಗುತ್ತದೆ. ಇದರಲ್ಲಿ ತುಪ್ಪಕ್ಕೆ ಮೊದಲನೇ ಸ್ಥಾನ, ಎಳ್ಳೆಣ್ಣೆಗೆ ಎರಡನೇಯ ಸ್ಥಾನ, ತೆಂಗಿನ ಎಣ್ಣೆಗೆ ಮೂರನೇಯ ಸ್ಥಾನವನ್ನು ನೀಡಲಾಗಿದೆ. ಜಗತ್ತಿನ ಹಿತಕ್ಕೋಸ್ಕರ ಮಾಡುವ ದೀಪಪೂಜನೆಯಿಂದ ವ್ಯಕ್ತಿಯ ಶರೀರ, ಮನಸ್ಸು ಸದೃಢವಾಗುತ್ತದೆ. ಎಂದು ದೀಪಪೂಜನೆಯ ಮಹತ್ವವನ್ನು ಹೇಳಿ, ಅರಶಿನ, ಕುಂಕುಮ, ಶ್ರೀಗಂಧ, ಹೂವು ಅಕ್ಷತೆ ಮುಂತಾದ ಪೂಜಾದ್ರವ್ಯಗಳ ಪ್ರಾಮುಖ್ಯತೆಯನ್ನು ವಿವರಿಸಿದರು.
ಆಕೃತಿ ಫ್ಯಾಕ್ಟರಿ ಮಾಲೀಕರು, ಸಿವಿಲ್ ಎಂಜಿನಿಯರ್, ವಿದ್ಯಾಕೇಂದ್ರದ ಹಳೆವಿದ್ಯಾರ್ಥಿ ಹಾಗೂ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದ್ಯಸರಾದ ನಾಗೇಶ್ ಮತ್ತು ವಿಜಯಲಕ್ಷ್ಮೀ ದಂಪತಿ, ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಾಯಾಜಿ, ಸಂಚಾಲಕ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಶಿಬಿರಾಧಿಕಾರಿ ಡಾ.ಕಮಲ ಪ್ರಭಾಕರ್ ಭಟ್, ಕಶೆಕೋಡಿ ಸೂರ್ಯನಾರಾಯಣ ಭಟ್, ಶಿಬಿರ ಕಾರ್ಯವಾಹಿಕಾ ಶೋಭಾ ವಿ.ಶೆಟ್ಟಿ ಉಪಸ್ಥಿತರಿದ್ದರು.
195 ಶಿಬಿರಾರ್ಥಿಗಳು, ವಿವಿಧ ಜವಬ್ದಾರಿ ಹೊಂದಿದಂತಹ ಶಿಕ್ಷಕಿಯರು, ಗಣಶಿಕ್ಷಕಿಯರು, ಶಾರೀರಿಕ ಶಿಕ್ಷಕಿಯರು, ಪ್ರಬಂದಕಿಯರನ್ನೊಳಗೊಂಡ ಈ ಶಿಬಿರದಲ್ಲಿ ಶಾರೀರಿಕ, ಬೌದ್ದಿಕ, ಮಾನಸಿಕ ಹೀಗೆ ಸರ್ವತೋಮುಖ ಬೆಳವಣಿಗೆಯ ಶಿಕ್ಷಣವನ್ನು ನೀಡಲಾಯಿತು.
ಸಂಘದ ಹಿರಿಯರಾದ ಅಚ್ಯುತ ನಾಯಕ್, ಮಹೇಶ್ವರ ಭಟ್, ನ.ಸೀತಾರಾಂ, ಸುರೇಶ್ ಪರ್ಕಳ, ಪ್ರಸಾದ್ ಬಿ.ಸಿ.ರೋಡ್, ಗಜಾನನ ಪೈ, ಮೀನಾಕ್ಷಿ ಮತ್ತು ಡಾ.ಯಜ್ಞಾ ಇವರುಗಳು ಮಾರ್ಗದರ್ಶನ ನೀಡಿದರು. ದಿನಾಂಕ 7ರ ಸಂಜೆ ಶಿಬಿರಾರ್ಥಿಗಳಿಂದ ಕಲ್ಲಡ್ಕ ಪೇಟೆಯಲ್ಲಿ ಪಥಸಂಚಲನ ನಡೆಯಿತು. ಉಪನ್ಯಾಸಕಿ ವಿಲಾಸಿನಿ ಸ್ವಾಗತಿಸಿ, ಜಯಲಕ್ಷ್ಮೀ ವಂದಿಸಿ, ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು.





