ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಅವರ ಭಾವಚಿತ್ರ ದುರುಪಯೋಗ ಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವ್ಯಕ್ತಿಯ ವಿರುದ್ಧ ಬುಧವಾರ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಜಗದೀಶ ಕಜೆ ಎಂಬವರು ಪೊಲೀಸರೊಗೆ ದೂರು ನೀಡಿದ್ದು,ಉಮೇಶ್ ಆಚಾರ್ಯ ಎಂಬ ಹೆಸರಿನ ಫೇಶ್ ಬುಕ್ ಖಾತೆಯಲ್ಲಿ ಈ ರೀತಿ ಅವಹೇಳನ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

