ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ) , ಜಾನ್ಸಿ ರಾಣಿ ಲಕ್ಷ್ಮೀ ಮಹಿಳಾ ಮಂಡಳಿ  (ರಿ) ಕಲ್ಲಡ್ಕ ಇವರ ಸಹಯೋಗದಲ್ಲಿ  ಜ್ಞಾನವಿಕಾಸ ಸದಸ್ಯರಿಗೆ ಮಾಸ್ಕ್ ವಿತರಣೆ ಹಾಗೂ ಕೋವಿಡ್ 19 ಬಗ್ಗೆ ಮಾಹಿತಿ ಕಾರ್ಯಕ್ರಮ ಕಲ್ಲಡ್ಕ ನೇತಾಜಿ ಯುವಕ ಮಂಡಲದಲ್ಲಿ ನಡೆಯಿತು .IMG-20200617-WA0064 (1)

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನ್ಸಿ ರಾಣಿ ಲಕ್ಷ್ಮೀ ಮಹಿಳಾ ಮಂಡಳಿಯ  ಅಧ್ಯಕ್ಷೆ ಮೀನಾಕ್ಷಿ ಆರ್ ಪೂಜಾರಿ ವಹಿಸಿದ್ದರು. ಈ ಸಂದರ್ಭ ಸುಮಾರು 50 ಮಂದಿ ಸದಸ್ಯರಿಗೆ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು  ವಿಟ್ಲ ಯೋಜನಾ ಕಚೇರಿ ಯೋಜನಾಧಿಕಾರಿ ಮೋಹನ್ .ಕೆ ನೆರವೇರಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ವೀರೇಶ್ ಅವರು ಕೋವಿಡ್ 19  ಹಾಗೂ ಡೆಂಗ್ಯೂ ಜ್ವರದ ಬಗ್ಗೆ  ಮಾಹಿತಿ ನೀಡಿದರು  ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ, ಮೇಲ್ವಿಚಾರಕರಾದ ಪ್ರೇಮ, ಸೇವಾ ಪ್ರತಿನಿಧಿ ಎವ್ಲೀನ್, ಒಕ್ಕೂಟದ ಉಪಾಧ್ಯಕ್ಷರಾದ ಅರುಣಾಕ್ಷಿ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *