ಕುಪ್ಪೆಪದವು: ಮರಳು ಲಾರಿಗಳ ಓವರ್ ಟೇಕ್ ಭರಾಟೆಯಲ್ಲಿ ಮರಳು ತುಂಬಿದ್ದ ಟಿಪ್ಪರ್ ರಸ್ತೆ ಪಕ್ಕಕ್ಕೆ ಸರಿದು  ಕಂಪೌಂಡ್ ಗೆ ವಾಲಿದ ಘಟನೆಯೊಂದು ಕುಪ್ಪೆಪದವು ಚರ್ಚ್ ಕ್ರಾಸ್ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. 20200603_163333

ಮರಳನ್ನು ತುಂಬಿಸಿಕೊಂಡು ಕುಪ್ಪೆಪದವಿನಿಂದ ಎಡಪದವಿನತ್ತ ಸಾಗುತ್ತಿದೆ ಟಿಪ್ಪರ್ ಲಾರಿಯ ಹಿಂದಿನಿಂದ ಬಂದ ಇನ್ನೊಂದು ಮರಳು ಸಾಗಿಸುವ ಟಿಪ್ಪರ್ ಓವರ್ ಟೇಕ್ ಮಾಡುವ ಧಾವಂತದಲ್ಲಿ ಡಾಮಾರು  ರಸ್ತೆಯ ಪಕ್ಕದ ಮಣ್ಣಿನಲ್ಲಿ ಸಿಲುಕಿ ಖಾಸಾಗಿಯವರ ಕಂಪೌಂಡ್ ವಾಲ್  ಗೆ ತಾಗಿ ವಾಲಿಕೊಂಡಿತು. ಇತ್ತೀಚೆಗೆ ಇಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಸಿ ಮಣ್ಣು ತುಂಬಿಸಿದ್ದು, ಮಳೆ ಬಂದಿದ್ದ ಕಾರಣ, ಓವರ್ ಟೇಕ್ ಮಾಡುವ ವೇಳೆ ಟಯರ್ ಗಳು ಮಣ್ಣಿನಲ್ಲಿ ಸಿಲುಕಿ ಟಿಪ್ಪರ್ ವಾಲಿಕೊಳ್ಳಲು ಕಾರಣವಾಗಿದೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.

By suddi9

Leave a Reply

Your email address will not be published. Required fields are marked *