ಸುದ್ದಿ9 ಬಜ್ಪೆ: ದಕ್ಷಿಣ ಕೊರಿಯಾದ ಇಂಚಿಯಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ ಪಂದ್ಯಾಟದಲ್ಲಿ ಭಾರತಕ್ಕೆ ಚಿನ್ನ ಹಾಗೂ ಕಂಚಿನ ಪದಕಗಳನ್ನು ತಂದುಕೊಟ್ಟ ಕೊಡಗಿನ ಹುಡುಗಿ ಎಂ. ಆರ್ ಪೂವಮ್ಮ ಆಅ.7ರ ಮಧ್ಯಾಹ್ನ 2.30ಕ್ಕೆ ದೆಹಲಿಯಿಂದ ಆಗಮಿಸಿದ್ದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾಡಳಿತ ಹಾಗೂ ದ.ಕ ಜಿಲ್ಲಾ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅದ್ಧೂರಿ ಸ್ವಾಗತವನ್ನು ನೀಡಲಾಯ್ತು.
ಕೇರಳದ ಚೆಂಡೆವಾದಕರು ಆಕರ್ಷಕವಾಗಿ ಚೆಂಡೆವಾದನಗೈಯ್ಯುವ ಮೂಲಕ ಚಿನ್ನ ಬೇಟೆಯಾಡಿದ ಪೂವಮ್ಮರಿಗೆ ಸ್ವಾಗತದ ಮುದ ನೀಡಿದರು. ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪೂವಮ್ಮರನ್ನು ಮುತ್ತಿಕೊಂಡ ಅಭಿಮಾನಿವೃಂದದವರು ಹಣೆಗೆ ತಿಲಕ ಹಾಗೂ ಹೂಹಾರ ಅಪರ್ಿಸಯವ ಮೂಲಕ ಸ್ವಾಗತ ನೀಡಿದರು. ಯುವಜನ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅವರು ಪೂವಮ್ಮರನ್ನು ಕರೆದುಕೊಂಡು ಬಂದು ನಿರ್ಮಿಸಲಾಗಿದ್ದ ವೇದಿಕೆಯ ಮುಂಭಾಗಕ್ಕೆ ಕರೆದುಕೊಂಡು ಬಂದು ಹೂವಿನ ಬೊಕೆ ನೀಡಿ ಸ್ವಾಗತಿಸಿದರು. ಈ ವೇಳೆ ಚಿನ್ನದ ಪದಕವನ್ನು ಎತ್ತಿ ಬೀಗಿದ ಪೂವಮ್ಮರಿಗೆ ಅಭಿಮಾನಿಗಳು ಕರತಾಡನಗೈಯ್ಯುವ ಮೂಲಕ ಅಭಿಮಾಣ ಪ್ರದರ್ಶಿಸಿದರು. ಕೆಲವರು ಪೂವಮ್ಮರಿಗೆ ಹಿತವಾದ ಚುಂಬನ ನೀಡುವ ಮೂಲಕ ಪ್ರೀತಿಯ ನ್ನು ಪ್ರದರ್ಶಿಸಿದರು. ಇದನ್ನು ಕಂಡ ಪೂವಮ್ಮ ಅಭಿಮಾನಿಗಳ ಪ್ರೀತಿಯನ್ನು ಕಂಡು ಮೂಖರಾದರು. ಹಣೆಗೆ ಅಗಲವಾದ ತಿಲಕವನ್ನಿಟ್ಟು ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸಿದ ಪೂವಮ್ಮರನ್ನು ಕಂಡು ಅಭಿಮಾನಿಗಳು ನಿಜಕ್ಕೂ ದಂಗಾಗಿದ್ದರು. ಪೂವಮ್ಮರ ಜೊತೆಯಲ್ಲಿ ನಿಂತು ಫೋಟೋ ಕ್ಲಿಕ್ಕಿಸುವುದರಲ್ಲೇ ಮಗ್ನರಾಗಿದ್ದರು.

7vp svagatha 3

7 vp  svagatha 2

7vp poovamma

7vp svagatha5

7vp svagatha 1
DSC02341

DSC02340

DSC02313

DSC02317

DSC02334

DSC02336
ಪೂವಮ್ಮರ ಜೊತೆ ಬಿ ರಮಾನಾಥ ರೈ., ಜಿಲ್ಲಾಧಿಕಾರಿ ಎಬಿ ಇಬ್ರಾಹಿಂ, ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪನವರ್, ಮುಂತಾದವರು ಉಪಸ್ಥಿತರಿದ್ದರು. ಬಳಿಕ ನಗರದ ಜ್ಯೋತಿಯಲ್ಲಿ ನಡೆಯಲಿರುವ ತೆರೆದ ವಾಹನದಲ್ಲಿ ನಡೆಯಲಿರುವ ಮೆರವಣಿಗೆಗೆ ಹೆಜ್ಜೆ ಹಾಕಲು ತೆರಳಿದ್ದಾರೆ

By suddi9

Leave a Reply

Your email address will not be published. Required fields are marked *