ಬಂಟ್ವಾಳ: ಕೊರೋನ ಪಾಸಿಟಿವ್ ಪತ್ತೆಯಾಗಿ ಸೀಲ್ ಡೌನ್ ಆಗಿದ್ದ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮವನ್ನು ಸೋಮವಾರ ಸೀಲ್ ಡೌನ್ ನಿಂದ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಪ್ರಕಟಿಸಿದ್ದಾರೆ. ಎ.4 ತುಂಬೆಯ ವ್ಯಕ್ತಿಯೊಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾದ ಬಳಿಕ ತುಂಬೆ ಜಂಕ್ಷನ್ ನಿಂದ ನೇತ್ರಾವತಿ ನದಿಕಿನಾರೆಯ ವರೆಗೆ ಸೀಲ್ ಡೌನ್ ಮಾಡಲಾಗಿತ್ತು.28 ದಿನಗಳ ಬಳಿಕ ಯಾವುದೇ ಸೋಂಕು ಕಾಣಿಸಿಕೊಳ್ಳದ ಹಿನ್ನಲೆಯಲ್ಲಿ ಈ ಪ್ರದೇಶವನ್ನು ಸೀಲ್ ಡೌನ್ ನಿಂದ ಮುಕ್ತಗೊಳಿಸಲಾಗಿದೆ. 
ಕಳೆದ ಒಂದೂವರೆ ತಿಂಗಳ ಬಳಿಕ ಲಾಕ್ ಡೌನ್ ಪ್ರದೇಶದಲ್ಲಿ ಸಡಿಲಿಕೆ ಮಾಡಿರುವ ಬಂಟ್ವಾಳ ಸೀಲ್ ಡೌನ್ ಪ್ರದೇಶ ಹೊರತುಪಡಿಸಿ ಮಾರ್ಕೆಟ್ ರಸ್ತೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟು ತೆರೆದಿತ್ತಾದರೂ ಜನಸಂಚಾರ ಮಾತ್ರ ನಿರೀಕ್ಷೆಗಿಂತಲೂ ವಿರಳವಾಗಿತ್ತು.ಜವುಳಿ,ಚಿನ್ನಾ
ಮದ್ಯ ಖರೀದಿಯ ಭರಾಟೆ:
ಆದರೆ ವೈನ್ ಶಾಪ್ ಗಳಿಗೆ ಮಧ್ಯಾಹ್ನದ ವರೆಗೆ ಮದ್ಯ ಖರೀದಿಯ ಭರಾಟೆ ನಡೆದಿತ್ತೆ ವಿನಹ ಇತರ ಅಂಗಡಿಗಳಿಗೆ ವ್ಯವಹಾರ ಅಷ್ಟಕಷ್ಟೆಯಾಗಿತ್ತು. ಮಾರ್ಕೆಟ್ ರಸ್ತೆಯಲ್ಲಂತು ಮಧ್ಯಾಹ್ನದ ಬಳಿಕ ಅಂಗಡಿ,ಮುಂಗಟ್ಟು ತೆರದಿತ್ತೆ ವಿನಹ ಜನಸಂಚಾರವೇ ಇರಲಿಲ್ಲ,ಹಾಗೆಯೇ ಬೆಳಿಗ್ಗೆಯಿಂದ ಒಂದಷ್ಟು ಒಡಾಡುತ್ತಿದ್ದ ಆಟೋರಿಕ್ಷಾಗಳು ಕೂಡ ಹೊತ್ತು ಮೀರಿತ್ತಿದ್ದಂತೆ ಸಂಚಾರವನ್ನು ಸ್ಥಗಿತಗೊಳಿಸಿತು. ಬಂಟ್ವಾಳದ ವಿವಿಧೆಡೆಯಲ್ಲಿರುವ ವೈನ್ ಶಾಪ್ ಗಳ ಮುಂದೆ ಹಾಲಾದ ಬಾಕ್ಸ್ ನಲ್ಲಿ ನಿಂತು ಸರತಿಯ ಮೂಲಕ ಮದ್ಯ ಖರೀದಿಸಿದ ದೃಶ್ಯ ಕಂಡು ಬಂತು.ಕೆಲ ವೈನ್ ಶಾಪ್ ನಲ್ಲಿ ಮಧ್ಯಾಹ್ನದ ಬಳಿಕ ಸ್ಟಾಕ್ ಮುಗಿದಿರುವ ಬಗ್ಗೆಯು ಮಾಹಿತಿಗಳಿವೆ.ಆಗಾಗ ಪೊಲೀಸರು,ಅಬಕಾರಿ ಇಲಾಖಾ ಸಿಬ್ಬಂದಿಗಳು ಅಗಮಿಸಿ ಇಲ್ಲಿ ಹಾಕಿರುವ ಷರತ್ ಪಾಲನೆಯಾಗುತ್ತಿದೆಯೇ ಎಂದು ಪರಿಶೀಲಿಸುತ್ತಿದ್ದರು.
ಸೀಲ್ ಡೌನ್ ಮುಂದುವರಿಕೆ:
ಚಿನ್ನದ ಪೇಟೆಯೆಂದು ಪ್ರತೀತಿ ಹೊಂದಿರುವ ಬಂಟ್ವಾಳದಲ್ಲಿ ಕೊರೋನಾ ಸೋಂಕಿಗೆ ಮೂವರು ಮೃತಪಟ್ಟರೆ ,ಇಬ್ಬರಲ್ಲಿ ಪಾಸಿಟಿವ್ ಕಾಣಿಸಿಕೊಂಡ ಹಿನ್ನಲೆಯಲ್ಲಿ 100 ಮೀ.ವ್ಯಾಪ್ತಿಗೆ ಸೀಲ್ ಡೌನ್ ಮಾಡಲಾಗಿದೆ. ಭಾಮಿ ಜಂಕ್ಷನ್ ನಲ್ಲಿ ಮಣ್ಣು ರಾಶಿ ಹಾಕಿ ರಸ್ತೆ ಸಂಚಾರಕ್ಕೆ ತಡೆಹಾಕಲಾಗಿದೆ.ಹಾಗೆಯೇ ಕೊಟ್ರಮಣಗಂಡಿ,ನೆರೆ ವಿಮೋಚನಾ ರಸ್ತೆ ಬಳಿ ಮತ್ತು ಒಳರಸ್ತೆಯನ್ನು ಮುಚ್ಚಲಾಗಿದೆ.ಇಲ್ಲಿ ಸೀಲ್ ಡೌನ್ ಮಾಡಿ ಕಂಟೈನ್ಮಂಟ್ ವಲಯ ಎಂದು ಗುರುತಿಸಲಾದೆ.
ಈ ರಸ್ತೆ ಮುಚ್ಚಿರುವುದರಿಂದ ಬಿ.ಸಿ.ರೋಡ್ ಮತ್ತಿತರ ಕಡೆ ಸಂಚರಿಸಲು ಅನಾನೂಕೂಲವಾಗಿದೆ. ರಥಬೀದಿ ಮುಚ್ಚಿರುವುದರಿಂದ ಜನಸಂಚಾರ ವಿರಳವಾಗಿದ್ದು ಈಗ ಮಾರ್ಕೆಟ್ ರಸ್ತೆಗೆ ಬರಬೇಕಾದರೆ ಸುತ್ತು ಬಳಸಿ ಬರಬೇಕಾಗಿದೆ.ಹಾಗಾಗಿ ಅಂಗಡಿಮುಂಗಟ್ಟುಗಳಲ್ಲಿ ವ್ಯವಹಾರ ಸೊರಗಲು ಕಾರಣವಾಗಿದೆ ಎಂಬ ಅಭಿಪ್ರಾಯ ಅಂಗಡಿ ಮಾಲಕರದ್ದಾಗಿದೆ. ಭಾಮಿಜಂಕ್ಷನ್ ನಲ್ಲಿ ಹಾಕಿರುವ ಮಣ್ಣು ರಾಶಿಯನ್ನು ತೆರವುಗೊಳಿಸುವಂತೆ ಬಂಟ್ವಾಳ ನಾಗರಿಕರು ತಾಲೂಕಾಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಬಿ.ಸಿ.ರೋಡ್ ನಲ್ಲಿ ಎಲ್ಲಾ ಅಂಗಡಿ,ಮುಂಗಟ್ಟುಗಳು ತೆರೆದಿದ್ದು, ಎಂದಿನಂತೆ ವಾಹನ ಸಂಚಾರ, ಜನಸಂಚಾರ ಎಂದಿನಂತಿತ್ತು.
