ಉಡುಪಿ:ಟೀಂ ಶೆಫಿನ್ಸ್ ಯೂತ್ ನೆಹರು ಯುವ ಕೇಂದ್ರ ಆಶ್ರಯದಲ್ಲಿ ಜೇಸಿಐ ಉಡುಪಿ ಇಂದ್ರಾಳಿ,ದೊಡ್ಡಣಗುಡ್ಡೆ ಪ್ರಕೃತಿ,ಮಾನವ ಹಕ್ಕು ಫೆಡರೇಶನ್,ಪ್ರೆಸ್ ಮಾಲಿಕರ ಸಂಘ ಅದೇ ರೀತಿ ಸ್ವಚ್ಚ ಭಾರತ ಫ್ರೇಂಡ್ಸ್ ಉಡುಪಿ ಅದರ ಸಹಯೋಗದಲ್ಲಿ ಫ್ರಫ್ರಥಮ ರಕ್ತದಾನಿಗಳಿಂದ ರಕ್ತದಾನ ಶಿಬಿರ ಕೆ.ಎಂ.ಸಿ ರಕ್ತ ನಿಧಿ ಕೇಂದ್ರ ದಲ್ಲಿ ಎ.28 ರಂದು ನಡೆಯಿತು.

IMG_20200428_120058
ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರದ ಜಿಲ್ಲಾ ಸಂಯೋಜಕ ವಿಲ್ಪ್ರೇಡ್ ಡಿ ಸೋಜ ಉದ್ಘಾಟಿಸಿ ಮಾತನಾಡಿ ಈ ರೀತಿಯ ಸಂದಿಗ್ದ ಪರಿಸ್ಥಿಯಲ್ಲಿ ಮೊದಲ ಬಾರಿಗೆ ಪ್ರಪ್ರಥಮ ರಕ್ತದಾನಿಗಳಿಂದ ರಕ್ತದಾನ ಶಿಬಿರ ನಡೆಯುತ್ತಿದೆ.ರಕ್ತದಾನದ ಮೂಲಕ ಮತ್ತೊಬ್ಬರ ಜೀವ ಉಳಿಸುವ ಕಾರ್ಯ ಯುವ ಜನರಿಂದ ನಡೆಯುತ್ತಿರುವುದು ಅಭಿನಂದನೀಯ ಎಂದರು.
ಭಾಗವಹಿಸಿದ ದಾನಿಗಳಿಗೆ ಅವರ ಭಾವಚಿತ್ರವಿರುವ ವಿಶೇಷ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.

ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ|| ಶಮ್ಮಿಶಾಸ್ತಿ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಶೆಫಿನ್ಸ್ ನ ಮನೋಜ್ ಕಡಬ,ಫಿನ್ಲಿ ಮನೋಜ್,ಸಾಗರ್ ಶೆಟ್ಟಿ,ಜೇಸಿಐ ಅದ್ಯಕ್ಷ ಎಂ.ಎನ್ ನಾಯಕ್,ಪೂರ್ಣಿಮಾ ಶೆಟ್ಟಿ,ಪ್ರೆಸ್ ಮಾಲಿಕರ ಸಂಘದ ಅದ್ಯಕ್ಷ ಮಹೇಶ್ ಕುಮಾರ್,ದಿನೇಶ್ ಭಾಂಧವ್ಯ,ಸ್ವಚ್ಚ ಭಾರತ ಫ್ರೆಂಡ್ಸ್ ನ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು,ವಿಜಯ ಮುಂತಾದವರು ಭಾಗವಹಿಸಿದ್ದರು.ಸುಮಾರು 70 ಜನರು ರಕ್ತದಾನ ಮಾಡಿದರು.

By suddi9

Leave a Reply

Your email address will not be published. Required fields are marked *