ಬಂಟ್ವಾಳ: ಜೈನ್ ಮಿಲನ್ ಬಂಟ್ವಾಳ ಮತ್ತು ಶ್ರೀ ದೇವಿ ಮೆಡಿಕಲ್ಸ್ ಸಹಯೋಗದಲ್ಲಿ ಸ್ಥಳೀಯ ಮೂರು ಠಾಣಾ ಸಿಬ್ಬಂದಿಗಳಿಗೆ ಅಗತ್ಯವಿರುವಷ್ಟು ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ನ್ನು ಮಂಗಳವಾರ ವಿತರಿಸಲಾಯಿತು. ಬಂಟ್ವಾಳ ವೃತ್ತ ನೀರಿಕ್ಷಕ ಟಿ.ಡಿ ನಾಗರಾಜ ಅವರ ಮುಖಾಂತರ ಗ್ರಾಮಾಂತರ ಠಾಣೆ ಬಂಟ್ವಾಳ ನಗರ ಠಾಣೆಯ ಎಸ್ ಐ ಠಾಣಾಧಿಕಾರಿಯಾದ ಅವಿನಾಶ್ ಮತ್ತು ಬಂಟ್ವಾಳ ಸಂಚಾರಿ ಠಾಣೆಯ ಎಸ್ ಐ ರಾಜೇಶ್ ಕೆ.ವಿ ಮುಖಾಂತರ ಆಯಾ ಠಾಣೆಯ ಸಿಬ್ಬಂದಿಗಳಿಗೆ ಮಾಸ್ಕ್,ಗ್ಲೌಸ್ ಹಾಗೂ ಸ್ಯಾನಿಟೈಸರನ್ನು ವಿತರಿಸಿದರು. 
ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8, ಮಂಗಳೂರು ವಿಭಾಗದ ಅಧ್ಯಕ್ಷ ಸುದರ್ಶನ್ ಜೈನ್, ಕಾರ್ಯದರ್ಶಿ ಸುಭಾಷ್ ಚಂದ್ರ ಜೈನ್, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಡಾ.ಸುದೀಪ್ ಕುಮಾರ್, ಕಾರ್ಯದರ್ಶಿ ಸನ್ಮತಿ ಜಯಕೀರ್ತಿ, ಉಪಾಧ್ಯಕ್ಷ ಹರ್ಷರಾಜ್ ಬಲ್ಲಾಳ್ ಉಪಸ್ಥಿತರಿದ್ದರು.
