ಬಂಟ್ವಾಳ: ವಿಟ್ಲ ಮತ್ತು ಬಂಟ್ವಾಳ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕಾರ್ಯಕರ್ತೆ,ಸಹಾಯಕಿಯರಿಗೆ ಗುರುವಾರ ಮಾಸ್ಕ್ ಗಳನ್ನು ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ವಿತರಿಸಲಾಯಿತು.
ಬಂಟ್ವಾಳ ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಹಾಗೂ ಫಲ್ಗುಣಿ ಸ್ತ್ರೀಶಕ್ತಿ ವಿವಿದೋದ್ದೇಶ ಬ್ಯಾಂಕ್ ಮಾಸ್ಕ್ ಗಳನ್ನು ಪ್ರಾಯೋಜಿಸಿದ್ದು ಜಿಲ್ಲಾ ಉಪನಿರ್ದೇಶಕರಾದ ಉಸ್ಮಾನ್ ಎ ಹಾಗೂ ಜಿಲ್ಲಾ ನಿರೂಪಣಾಧಿಕಾರಿ ಶ್ಯಾಮಲಾ ಸಿ ಕೆ ವಿತರಿಸಿದರು. ಒಕ್ಕೂಟ ಅಧ್ಯಕ್ಷೆ ಸುಧಾ ,ಕಾರ್ಯದರ್ಶಿ ಗೀತಾಜಯತೀರ್ಥ, ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಶಿ, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಬಾಯಿ ಹೆಚ್, ಹಿರಿಯ ಮೇಲ್ವೀಚಾರಕಿ ಬಿ ಭಾರತಿ, ಶಾಲಿನಿ, ಸರೋಜ ಭಟ್ , ಸುಜಾತ, ಹಾಜರಿದ್ದರು.
