ಬಂಟ್ವಾಳ:ತಾಲೂಕಿನ ಸಜಿಪನಡುವಿನಲ್ಲಿ ತನ್ನ ಹೆತ್ತವರೊಂದಿಗೆ ಕೇರಳಕ್ಕೆ ತೆರಳಿದ್ದ 10 ತಿಂಗಳ ಪುಟ್ಟ ಮಗುವಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ ಶನಿವಾರ ತುಂಬೆಯಲ್ಲಿ ಕಳೆದ ಎರಡು ವಾರಗಳ ಹಿಂದೆಯಷ್ಟೇ ದೆಹಲಿಗೆ ಹೋಗಿ ಬಂದಿದ್ದ ಯುವಕನಲ್ಲಿ ಕೊರೊನಾ ಸೋಂಕು ತಗಲಿರುವುದು ಖಚಿತಪಟ್ಟ ಹಿನ್ನಲೆಯಲ್ಲಿ ಇದೀಗ ಗ್ರಾಮಸ್ಥರಲ್ಲಿ ಅಚ್ಚರಿ,ಆತಂಕ ಮೂಡಿಸಿದೆ.

ಈಗಾಗಲೇ ತುಂಬೆ ಗ್ರಾಮ ಪ್ರವೇಶಿಸುವ ಎಲ್ಲಾ ಸಂಪಕ೯ ರಸ್ತೆಗಳನ್ನು ಸಜಿಪನಡು ಮಾದರಿಯಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಂಚಾರ
ಬಂದ್ ಮಾಡಿ ಧ್ವನಿವಧ೯ಕದ ಮೂಲಕ ಎಚ್ಚರಿಸಿದ್ದಾರೆ. ರಾ.ಹೆ.ಯಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದರೂ,ಸರಕು ಸಾಗಣೆ,ಪಾಸ್ ಹೊಂದಿರುವ ವಾಹನಗಳ ಸಂಚಾರಕ್ಕೆ ಅನುವುಮಾಡಿಕೊಡಲಾಗುತ್ತಿದೆ. ಆದರೆ ಒಳರಸ್ತೆಯಲ್ಲಿರುವ ಗ್ರಾಮಸ್ಥರಿಗೆ ದಿಗ್ಬಂಧನ ವಿಧಿಸಿರುವ ದೖಶ್ಯ ಶನಿವಾರ ಕಂಡು ಬಂದಿದೆ.
