ಬಂಟ್ವಾಳ: ಕಿಲ್ಲರ್ ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಗೆ ಸಿಲುಕಿ ಕಂಗಾಲಾಗಿರುವ ಸಜಿಪನಡು, ಸಜಿಪಪಡು ಸಜಿಪಮುನ್ನೂರು ,ಸಜಿಪಮೂಡಗ್ರಾಮದಲ್ಲಿರುವ ಸುಮಾರು 85 ಬಡಕುಟುಂಬಗಳಿಗೆ ಸಜೀಪ ಜನ ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ದಿನನಿತ್ಯದ ವಸ್ತುಗಳನ್ನು ವಿತರಿಸಲಾಯಿತು. 
ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ, ಗ್ರಾಮದ ತಂತ್ರಿಗಳಾದ ಎಂ. ಸುಬ್ರಮಣ್ಯ ಭಟ್, ಸುರೇಶ್ ಬಂಗೇರ, ರಮೇಶ್ ಗುಲಾಲು, ದೀಪಕ್, ಸತೀಶ್, ಪ್ರಶಾಂತ್, ಸುಂದರ ಪೂಜಾರಿ ,ಪರಮೇಶ್ವರ, ಜಗದೀಶ ಐತಾಳ , ನಾಗೇಶ, ಹರೀಶ್, ಲೋಹಿತ್ ಮತ್ತಿತರಿದ್ದರು.
