ಪೊಳಲಿ: ಕೊರೋನ ಭೀಕರತೆಯಿಂದ ಅಸ್ತವ್ಯಸ್ತಗೊಂಡ ಜನತೆ ಲಾಕ್ ಡೌನ್ ನಿಂದ ಮನೆಯಿಂದ ಹೊರಗೆ ಬರದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಸರಕಾರದ ನಿರ್ದೇಶನದಂತೆ ಪೊಳಲಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಕ್ಕಿ ಮತ್ತು ಬೇಳೆಯನ್ನು ವಿತರಿಸಲು ಸೂಚಸಲಾಗಿತ್ತು .
ಏ. 1ರಂದು ಬುಧವಾರ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಹೆತ್ತವರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ ವಿತರಿಸಿದ ಅಕ್ಕಿ ಬೇಳೆಗಳನ್ನು ಮನೆಗೆ ಕೊಂಡೊಯ್ದರು. 
