ಬಂಟ್ವಾಳ : ಪ್ರಗತಿಪರ ಕೃಷಿಕ,ಬಂಟ್ವಾಳ ಶಾಸಕ ಉಳಿಪ್ಪಾಡಿ ರಾಜೇಶ್ ನಾಯ್ಕ್ ಅವರು ಗಂಜಿಮಠದಲ್ಲಿರುವ ಒಡ್ಡೂರು ಫಾಮ್೯ನಲ್ಲಿ ಸಾವಯವ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು,ಪ್ರಧಾನಿ ನರೇಂದ್ರಮೋದಿಯವರ ಕರೆಯಂತೆ ಮನೆಯ ವಾತಾವರಣದಲ್ಲಿದ್ದು ಗಮನಸೆಳೆದಿದ್ದಾರೆ. ಜನಪ್ರತಿನಿಧಿಗಳು ಸರಕಾರದ ಆದೇಶಗಳನ್ನು ಪಾಲಿಸಿ ಇತರರಿಗೆ ಮಾದರಿಯಾಗಬೇಕು ಹಾಗಿದ್ದಲ್ಲಿ ಮಾತ್ರ ಜನರ ಸ್ಪಂದನೆ ಮತ್ತು ಅಧಿಕಾರಿಗಳಿಗೆ ಕೆಲಸ ಮಾಡಲು ಸಾದ್ಯ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಬೆಲೆ ಕೊಟ್ಟು, ಕೊರೋನೊದಿಂದ ಮುಕ್ತಿ ಹೊಂದಲು ದಯಮಾಡಿ ಮನೆಯಿಂದ ಹೊರಬರಬೇಡಿ , ಅಧಿಕಾರಿಗಳಿಗೆ ಕೆಲಸ ನೀಡಬೇಡಿ ಅವರಿಗೂ ಕುಟುಂಬ, ಸಂಸಾರವಿದ್ದು ನಮ್ಮ ವೈಯಕ್ತಿಕ ಜಾಗೃತಿಯ ಮೂಲಕ ಸರಕಾರಿ ಅಧಿಕಾರಿಗಳ ಜಾಗೃತಿಗಾಗಿಯು ಸಹಕಾರ ನೀಡಿ ಎಂದು ಅವರು ಟ್ವೀಟರ್ ಮೂಲಕ ಮನವಿ ಮಾಡಿದ್ದಾರೆ.

ಜನತಾ ಕರ್ಫ್ಯೂನಿಂದಾಗಿ ದೇಶದ ಜನರ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವಂತೆ ನಾನು ಮನೆಯ ವಾತವರಣದಿಂದ ಹೊರಬಂದಿಲ್ಲ ಮನೆಯಲ್ಲಿದ್ದುಕೊಂಡು ದೂರವಾಣಿಯ ಮೂಲಕ ತಾಲೂ ಅಧಿಕಾರಿಗಳಿಗೆ ಕೆಲ ಸಲಹೆ, ಸೂಚನೆ ನೀಡುತ್ತಿದ್ದೇನೆ. ಬಿ.ಸಿ.ರೋಡಿನಲ್ಲಿರುವ ನನ್ನ ಕಚೇರಿಯಲ್ಲಿ ಸಹಾಯವಾಣಿಯನ್ನು ತೆರೆದಿದ್ದು ಕ್ಷೇತ್ರದ ಜನತೆಯ ಸಂಕಷ್ಟಗಳಿಗೆ ವಾರ್ ರೂಂ ಉತ್ತಮವಾಗಿ ಸ್ಪಂದಿಸುತ್ತಿದೆ. ಪ್ರಜ್ಞಾವಂತ ನಾಗರಿಕರು ಕೂಡ ಮನೆಯಲ್ಲೇ ಇದ್ದು, ಕೊರೋನಾ ನಿರ್ಮೂಲನೆಗೆ ಶ್ರಮ ತೊಡೋಣ ಕೃಷಿಕನಾದ ನಾನು ಬಿಡುವಿನಲ್ಲಿ ಮನೆಯ ತೋಟದಲ್ಲಿ ಸಾವಯುವ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದೆನೆ.
ಎಂದು ಶಾಸಕ ರಾಜೇಶ್ ನಾಯ್ಕ್ ಅವರು ತನ್ನ ಕ್ಷೇತ್ರದ ಜನತೆಗೆ ಟ್ವೀಟರ್ ಮೂಲಕ ಸಂದೇಶ ರವಾನಿಸಿದ್ದಾರೆ.ಬಂಟ್ವಾಳ ತಾಲೂಕಿನಲ್ಲಿ 340ಕ್ಕೂ ಆಶಾ ಕಾರ್ಯಕರ್ತೆಯರು ದಿನವಿಡಿ ತಮ್ಮ. ಆರೋಗ್ಯದ ಕಾಳಜಿಯನ್ನು ಲೆಕ್ಕಿಸದೆ ಜನರಿಗಾಗಿ ಗ್ರಾಮದ ಪ್ರತಿ ಮನೆ, ಮನೆಗಳಿಗೆ ಬೇಟಿ ನೀಡಿ ಜನರು ಹೊರಬರದಂತೆ ಕೊರೋನೊ ಮುಂಜಾಗ್ರತಾ ಕ್ರಮಗಳ ಮಾಹಿತಿ ನೀಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರ ಪರಿಶ್ರಮವನ್ನು ಶಾಸಕರು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ. ನಾವೆಲ್ಲರು ಮನೆಯಲ್ಲಿದ್ದುಕೊಂಡುತಾಲೂಕು ಆಡಳಿತದೊಂದಿಗೆ ಸಹಕರಿಸೋಣ.
ಕೊರೊನೊ ಹಿಮ್ಮಟ್ಟಿಸಲು ಪಣ ತೊಡೋಣ, ಆರೋಗ್ಯವಂತ ನವ ಬಂಟ್ವಾಳವನ್ನು ಕಟ್ಟೋಣ ಎಂದು ಟ್ವೀಟ್ ಮಾಡಿರುವ ಶಾಸಕರುಕೆಲವು ಕಡೆ ಅನಾವಶ್ಯಕ ತಿರುಗಾಡುವುದು ಹಾಗೂ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ತೊಂದರೆ ನೀಡುವುದು ಗಮನಕ್ಕೆ ಬಂದಿದ್ದು ಅಂತವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಮೇಲಾಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.
