ಬಂಟ್ವಾಳ:  ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆ, ಹಳ್ಳಿಗಳಲ್ಲಿ ಸಂಪೂರ್ಣ ಬಂದ್ ಶನಿವಾರ ಕಂಡುಬಂತು. ಹಳ್ಳಿ ಪ್ರದೇಶಗಳಲ್ಲಿ ಹಾಲಿನ ಡೇರಿಗಳಲ್ಲಿ ಕೆಲವೆಡೆ ಹಾಲು ವಿತರಣೆಯಾದರೆ, ಪಟ್ಟಣ ಪ್ರದೇಶಗಳಲ್ಲಿ ಕೆ.ಎಂ.ಎಫ್.ನಿಂದ ಸರಬರಾಜಾಗುವ ನಂದಿನಿ ಹಾಲು ಪೂರೈಕೆ ಆಗಿರಲಿಲ್ಲ. ಹಾಲಿನ ಡೀಲರ್ ಗಳೂ ಬಾರದ ಕಾರಣ ಮಕ್ಕಳಿರುವ ಮನೆಯವರು ಪರದಾಟ ಅನುಭವಿಸಬೇಕಾಯಿತು.
IMG-20200328-WA0018
ಬಂಟ್ವಾಳ ನಗರ ಪರಿಸರದಲ್ಲಿ ಬೆಳಗ್ಗಿನ ಹೊತ್ತು ಕೆಲ ತರಕಾರಿ,ದಿನಸಿ ಅಂಗಡಿ ತೆರೆದು ಎಂದಿನಂತೆ ವ್ಯವಹಾರ ನಡೆಸಿತ್ತು.ಸುಮಾರು 7 ಗಂಟೆಯ ವೇಳೆಗೆ ಬಂಟ್ವಾಳ ನಗರ ಠಾಣೆಯ ಎಸ್ ಐ ಅವಿನಾಶ್ ಅವರು ಎಲ್ಲು ಅಂಗಡಿ ,ಮುಂಗಟ್ಟು ತೆರೆಯಲು ಅವಕಾಶವಿಲ್ಲ ಎಂದು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ತಕ್ಷಣವೇ ತೆರೆದಿದ್ದ ಅಂಗಡಿಗಳು ಮುಚ್ಚಲ್ಪಟ್ಟಿತು. ಅಗತ್ಯ ವಸ್ತು ಖರೀದಿಗೆ ಬಂದವರು ಕೂಡ ಸ್ಥಳದಿಂದ ಮನೆಯತ್ತ ದೌಡಾಯಿಸಿದರು.IMG_20200328_073509
ಕೆಲವರಿಗೆ ತರಕಾರಿ,ದಿನಬಳಕೆ ವಸ್ತು ಸಿಕ್ಕಿದ್ದರೆ,ಇನ್ನಕೆಲವರು ಬರಿಗೈಯಲ್ಲಿ ವಾಪಾಸ್ ತೆರಳಬೇಕಾಯಿತು. ಶನಿವಾರ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡುವವರ ಸಂಖ್ಯೆಯು ಕಡೊಮೆ ಇತ್ತು.  ಉಳಿದಂತೆ ಬಂಟ್ವಾಳ, ಬಿ.ಸಿ.ರೋಡಿನಲ್ಲಿ ಮೆಡಿಕಲ್ ಶಾಪ್ ಗಳು ತೆರೆದಿತ್ತು. ಎಲ್ಲೆಡೆ ಬಿಗು ಬಂದೋಬಸ್ತ್ ಏರ್ಪಟ್ಟಿದ್ದು, ತಾಲೂಕಾಡಳಿತ ನಿಗಾ ವಹಿಸಿದೆ. ಕಡೆಗೋಳಿ,ಅರ್ಕುಳ,ಪಡೀಲ್ ನಲ್ಲಿ ಪೊಲೀಸರು ನಾಕಾಬಂಧಿ ಹಾಕಿ ಮಂಗಳೂರು ಪ್ರವೇಶಕ್ಕೆ ತಡೆಹಾಕಲಾಗಿತ್ತು.ಅಗತ್ಯವಿರುವ ವಾಹನಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು.ಗ್ರಾಮೀಣ ಭಾಗದಲ್ಲಿಯು ಸಂಪೂರ್ಣ ಬಂದ್ ಆಗಿರುವ ಬಗ್ಗೆ ವರದಿಗಳು ಬಂದಿವೆ.

By suddi9

Leave a Reply

Your email address will not be published. Required fields are marked *