ಮುಂಬಯಿ : ಕುಲಾಲ ಸಂಘ ಮುಂಬಯಿ ಪ್ರಾಯೋಜಕತ್ವದ ಜ್ಯೋತಿ ಕೊ. ಆಪ್. ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾಗಿ ಗಿರೀಶ್ ಸಾಲ್ಯಾನ್ ಪುನರಾಯ್ಕೆಯಾಗಿದ್ದಾರೆ.ಮಾ. 12 ರಂದು ಮುಂಬಯಿ ಪೋರ್ಟ್ ನಲ್ಲಿನ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ನೂತನ ಪದಾಧಿಕಾರಿಗಳನ್ನು ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಯಿತು.

13d4ಸೊಸೈಟಿಯ ಉಪ ಕಾರ್ಯಾಧ್ಯಕ್ಷರಾಗಿ ಕುಲಾಲ ಸಂಘ ಮುಂಬಯಿ ಯ ಅಧ್ಯಕ್ಷರಾದ ಪಿ. ದೇವದಾಸ ಎಲ್. ಕುಲಾಲ್, ಗೌರವ ಕಾರ್ಯದರ್ಶಿಯಾಗಿ ಕುಲಾಲ ಸಂಘ ಮುಂಬಯಿ ಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ. ಶೇಖರ ಮೂಲ್ಯ, ಕೋಶಾಧಿಕಾರಿಯಾಗಿ ಕುಲಾಲ ಸಂಘ ಮುಂಬಯಿ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಜೊತೆ ಕೋಶಾಧಿಕಾರಿ ಭಾರತಿ ಆರ್ಕ್ಯನ್, ನಿರ್ದೇಶಕರುಗಳಾಗಿ ನ್ಯಾ. ಉಮಾನಾಥ ಮೂಲ್ಯ, ಗಿರೀಶ್ ವಿ ಕರ್ಕೇರ, ಸುರೇಖಾ ಆರ್ ಕುಲಾಲ್, ಕರುಣಾಕರ ಬಿ. ಸಾಲ್ಯಾನ್, ದೇವದಾಸ್ ಎಂ. ಬಂಜನ್ ಮತ್ತು ಸೋಪನ್ ವಾಂಖಡೆ ಆಯ್ಕೆಯಾಗಿದ್ದಾರೆ.

13d3ಜ್ಯೋತಿ ಕ್ರೆಡಿಟ್ ಸೊಸೈಟಿಯ ನೂತನ ಸಮಿತಿಗೆ ಕುಲಾಲ ಸಂಘ ಮುಂಬಯಿ ಯ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಉಪಸಮಿತಿಗಳು, ಪ್ರಾದೇಶಿಕ ಸಮಿತಿಗಳು ಅಭಿನಂದನೆಯನ್ನು ಸಲ್ಲಿಸಿದೆ.

13d2

13d1

By suddi9

Leave a Reply

Your email address will not be published. Required fields are marked *