ಬಂಟ್ವಾಳ: ಸಜೀಪಮೂಡ ಗ್ರಾಮದ ಈಶ್ವರಮಂಗಲ  ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಪ್ರತಿಷ್ಠಾಪನ ಚತುರ್ಥ ವರ್ಧಂತ್ಯುತ್ಸವ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ತಾಂತ್ರಿಕ ಆಗಮ ವಿಧಿವಿಧಾನಗಳೊಂದಿಗೆ ಜರಗಿತು.

IMG-20200312-WA0022 ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ  ಪುಣ್ಯಹಪಂಚಗವ್ಯ , ಗಣಹೋಮ, ಸಾನಿಧ್ಯ ಕಲಶಾಭಿಷೇಕ, ರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕ, ಮಹಾಪೂಜೆ ಪ್ರಸನ್ನ ಪೂಜೆ, ಕಲ್ಪೋಕ್ತ ಪೂಜೆ, ಸಾನಿಧ್ಯ ದೈವಗಳಿಗೆ ಪಂಚಪರ್ವ ಸೇವೆ, ರಂಗಪೂಜೆ, ಕಾರ್ತಿಕ ಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆಯು ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ,ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸಂಗೀತ- ನೃತ್ಯ- ಗಾನ ವೈಭವವು ಹಾಗೆಯೇ ಜಾತ್ರೆಯ ಅಂಗವಾಗಿ ದೇವರ ಉತ್ಸವ ಬಲಿ, ನೃತ್ಯ ಬಲಿ, ವಸಂತ ಕಟ್ಟೆಪೂಜೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ಸಂಪನ್ನಗೊಂಡಿತು.

IMG-20200312-WA0023ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅನುದಾನದಲ್ಲಿ ದೇವಾಲಯದ ವಠಾರದಲ್ಲಿ ಅಳವಡಿಸಲಾದ ಹೈಮಾಸ್ಟ್ ದೀಪ ವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಸದಾನಂದ ಪೂಂಜ, ದೇವಾಲಯದ ಆಡಳಿತಾಧಿಕಾರಿ ನಿರ್ಮಲ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,  ಸ್ಥಳೀಯಪಂಚಾಯಿತ್ ಅಧ್ಯಕ್ಷ ವಿಶ್ವನಾಥ ಬೆಲ್ಚಡ ಕೂಡೂರು,  ಮಾಜಿ ಅಧ್ಯಕ್ಷ ಶೋಭಿತ್ ಪೂಂಜಾ, ಎಂ ಸುಬ್ರಹ್ಮಣ್ಯ ಭಟ್ ಜಯಶಂಕರ ಬಾಸ್ರಿತಾಯ, ಸದಾನಂದ ಶೆಟ್ಟಿ, ಯಶವಂತ ದೇರಾಜೆ, ಜಯಪ್ರಕಾಶ್, ರಾಕೇಶ್ ಶೆಟ್ಟಿ , ಕುಸುಮ, ಗಣೇಶ್ ಕಾರಂತ, ಚಂದ್ರಹಾಸ, ಚಂದ್ರಶೇಖರ ಶೆಟ್ಟಿ , ಹರೀಶ್ ನಾಯಕ್, ಯೋಗೀಶ್ ಬೆಲ್ಚಡ ಕೂಡೂರು, ರಮೇಶ್, ಹರೀಶ್ , ವಾಸು ಗಟ್ಟಿ, ಮುಳಿಂಜ ವೆಂಕಟೇಶ್ವರ ಭಟ್, ರಾಧಾ ಶಾಂತಿರಾಜ ರೈ, ಸಂಜೀವ ಪೂಜಾರಿ, ಶ್ರೀಕಾಂತ್ ಶೆಟ್ಟಿ ,ಹರಿಣಾಕ್ಷಿ, ಸುರೇಶ್ ಪೂಜಾರಿ, ಕುಶಾಲಕ್ಷ, ಬಾಲಕೃಷ್ಣ, ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *