ಕೈಕಂಬ: ಶ್ರೀ ಕಾವೇಶ್ವರ ದೇವಸ್ಥಾನದ ವರ್ಷಾವಧಿ ಜಾತೃಆ ಮಹೋತ್ಸವವು ಮಾ.8 ರಿಂದ ಮಾ.12ರವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉದಯ ಪಾಂಗಣ್ಣಾಯರವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಮಾ.11ರಂದು ಬುಧವಾರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಕ್ಷೇತ್ರದ ಅರ್ಚಕರಾದ ಪ್ರಕಾಶ್ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಗೂ ಎಲ್ ಶೆಟ್ಟಿ, ಸದಸ್ಯರಾದ ಬಾರಿ ಭಂಡಾರಿ, ಗಂಗಾಧರ ಜೆ.ಪೂಜಾರಿ, ವೀಣಾ ಭಟ್, ಸವಿತಾ ಎನ್ ಶೆಟ್ಟಿ, ಕಿಶೋರು ಭಂಡಾರಿ, ರಘುರಾಮ್ ಭಟ್ ಹಾಗೂ ಮಾಜಿ ಸಚಿವ ರಮಾನಾಥ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಹಾಗೂ ಭಕ್ತಾಧಿಗಲು ಉಪಸ್ಥಿತರಿದ್ದರು.
