ಕೈಕಂಬ: ಶ್ರೀ ಕಾವೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಸಂದರ್ಭ ದಿ. ಬೆಳ್ಳೂರುಗುತ್ತು ಹೇಮಾವತಿ ಎಂ ರೈ ಇವರ ಸ್ಮರಣಾರ್ಥ ನಿರ್ಮಿಸಲಾದ “ಅನ್ನಪೂರ್ಣ ಭವನ” ವನ್ನು ಮಾಜಿ ಸಚಿವ ರಮಾನಾಥ ರೈ ಅವರು ಬುಧವಾರ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಉಧ್ಯಮಿಗಳಾದ ದೇವನಂದ ಶೆಟ್ಟಿ, ಯಾಧವ ಕೋಟ್ಯಾನ್ ಪೆರ್ಮುದೆ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ.ಸದಸ್ಯ ಯಶವಂತ ಪೂಜಾರಿ ಪೊಳಲಿ, ಬಡಗಬೆಳ್ಳೂರು ಗ್ರಾ. ಪಂ.ಅಧ್ಯಕ್ಷೆ ಜಯಂತಿ, ಕೃಷ್ಣನಂದ ಶೆಟ್ಟಿ ಪರಾರಿಗುತ್ತು,ಅಜಿತ್ ಕುಮಾರ್ ರೈ, ಆರತಿ ರೈ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ಭಟ್, ಗಂಗಾಧರ ಪೂಜಾರಿ ಕೊಪ್ಪಳ, ಕಿಶೋರ್ಭಂಡಾರಿ , ವೀಣಾ ಭಟ್,ಸವಿತಾ ಎನ್ ಶೆಟ್ಟಿ, ಚಂದ್ರಶೇಖರ ಅಜಿಲ, ದೇವಪ್ಪ ಪೂಜಾರಿ , ಉಮೇಶ್ ಶೆಟ್ಟಿ , ಪುಷ್ಪರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
