ತುಳುನಾಡಿನ ಸಂಸ್ಕøತಿ ಪರಂಪರೆ ಉಳಿಸಲು ಶ್ರಮಿಸಿ: ವಕೀಲೆ ಸಹನಾ ಕುಂದರ್ ಸಲಹೆ
ಬಂಟ್ವಾಳ:ಪ್ರಸಕ್ತ ಯುವಜನತೆ ಪಾಶ್ಚಾತ್ಯ ಸಂಸ್ಕøತಿಗೆ ಆಕರ್ಷಿಸುವ ಬದಲಾಗಿ ಧಾರ್ಮಿಕತೆ ಮತ್ತು ಗುರು ಹಿರಿಯರಿಗೆ ಗೌರವ ನೀಡುವ ತುಳುನಾಡಿನ ಶ್ರೇಷ್ಟ ಪರಂಪರೆ ಉಳಿಸಿಕೊಳ್ಳಲು ಶ್ರಮಿಸಬೇಕು ಎಂದು ವಕೀಲೆ ಸಹನಾ ಕುಂದರ್ ಸೂಡ ಸಲಹೆ ನೀಡಿದ್ದಾರೆ.
ಇಲ್ಲಿನ ಅಮ್ಟಾಡಿ ಗ್ರಾಮದ ಪಚ್ಚಿನಡ್ಕ ಮಾತೃಭೂಮಿ ಗೆಳೆಯರ ಬಳಗ ವತಿಯಿಂದ ಶನಿವಾರ ರಾತ್ರಿ ಏರ್ಪಡಿಸಿದ್ದ 9ನೇ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಸ್ಥಳೀಯ ಉದ್ಯಮಿ ಕೆ.ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಜಗದೀಶ ನೆತ್ರಕೆರೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ವಕೀಲ ಅರುಣ್ ರೋಶನ್ ಡಿಸೋಜ, ಮಂಗಳೂರು ಶ್ರೀರಾಮ ಸೇನೆ ಮುಖಂಡ ಹರೀಶ ಅಮ್ಟಾಡಿ ಶುಭ ಹಾರೈಸಿದರು.ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ತಾ.ಪಂ.ಸದಸ್ಯ ಯಶವಂತ ಪೊಳಲಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಶೆಟ್ಟಿ ಬಟ್ಟತ್ತೋಡಿ, ವಕೀಲ ಪ್ರದೀಪ್ ಎನ್.ಕೆ., ಗುತ್ತಿಗೆದಾರ ಯಶೋಧರ ಪೊಳಲಿ, ಉದ್ಯಮಿ ಉಮೇಶ ಸಾಲ್ಯಾನ್, ಪ್ರಮುಖರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಭುವನೇಶ್ ಪಚ್ಚಿನಡ್ಕ, ಆನಂದ ಶಂಭೂರು ಮತ್ತಿತರರು ಇದ್ದರು. ಇದೇ ವೇಳೆ ಶ್ರೀರಾಮ ಸೇನೆ ಮುಖಂಡ ಹರೀಶ ಅಮ್ಟಾಡಿ, ಗ್ರಾ.ಪಂ.ಸದಸ್ಯರಾದ ಹರೀಶ ಶೆಟ್ಟಿ ಅಮ್ಟಾಡಿ, ಬಬಿತಾ ಕೋಟ್ಯಾನ್, ಜಯಂತಿ ಇವರನ್ನು ಸನ್ಮಾನಿಸಲಾಯಿತು.ಶೇಖರ ಶೆಟ್ಟಿ ಅಮ್ಟಾಡಿ ಸ್ವಾಗತಿಸಿ, ನರಸಿಂಹ ಶೆಟ್ಟಿ ಮಾಣಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
