ಪ್ರಾಚೀನ ಕಾಲದಿಂದಲೂ ಪ್ರಕೃತಿ ಹೆಣ್ಣಿಗೆ ಸಾಮಾಜಿಕ ಸ್ತರದಲ್ಲಿ ಸಮಾನತೆಯ ಅವಕಾಶವಿತ್ತು. ಕೃಷಿ ಪ್ರಧಾನ ವ್ಯವಸ್ಥೆಯಲ್ಲಿ ಸಾಮಾಜಿಕ ಕಾಲ ಘಟ್ಟದಲ್ಲಿ ಪ್ರಕೃತಿಯ ಆರಾಧನೆಯೊಂದಿಗೆ ಮಹಿಳೆ ಪೂಜಾನೀಯ ಭಾವದಿಂದ ಪೂಜಿಸಲ್ಪಡುತ್ತಿದ್ದಳು. ಆಧುನಿಕ ಕಾಲಘಟ್ಟದಲ್ಲಿ ಅವಕಾಶಗಳ ಸದುಪಯೋಗ ಪಡೆದುಕೊಂಡು ಮಹಿಳಾ ಸಬಲೀಕರಣದ ಚಿಂತನೆಯ ಅವಲೋಕನ ಮಾಡಬೇಕಾದ ಅಗತ್ಯವಿದೆ ಎಂದು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯ ವಲಯ ಟ್ರಾನ್ಸ್‍ಪ್ಲಾಂಟ್ ಸಂಯೋಜಕಿ ಶ್ರೀಮತಿ ಪದ್ಮಾವತಿ ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು ಇಲ್ಲಿನ ಮಹಿಳಾ ದೌರ್ಜನ್ಯ ತಡೆ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಜಂಟಿ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದು ಮಹಿಳಾ ದೌರ್ಜನ್ಯ ತಡೆ ಘಟಕದ ಸಂಯೋಕಿಯಾದ ಪ್ರೊ. ಚಂದ್ರಿಕಾ ನಾಯಕ್ ಯು ಆಪ್ತ ಸಲಹಗಾರರಾದ ಡಾ. ಮೇರಿ ಎಂ.ಜೆ. ಮತ್ತು ಅಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರಾದ ಡಾ. ರವಿ.ಎಂ.ಎನ್ ಇವರು ಉಪಸ್ಥಿತರಿದ್ದರು. ಎಂ.ಕಾಂ. ವಿದ್ಯಾರ್ಥಿನಿಯರಾದ ಕು.ಪ್ರದ್ವಿತಾ ಜೈನ್, ಕು. ಸೌಮ್ಯ , ಕು. ವಿದ್ಯಾ ಮತ್ತು ಕು. ತೇಜಸ್ವಿನಿ ತಮ್ಮ ಪ್ರಬಂಧವನ್ನು ಮಂಡಿಸಿದರು. ಮಹಿಳಾ ಜಾಗೃತಿಯ ಕುರಿತಾದ ಭಿತ್ತಿ ಚಿತ್ರ ಸ್ಪರ್ಧೆ ನಡೆಸಲಾಯಿತು.ಕು. ನಿಕ್ಷಿತಾ ಪ್ರಾರ್ಥಿಸಿ, ಕು. ಅಕ್ಷತಾ ಸ್ವಾಗತಿಸಿ, ಕು. ರಕ್ಷಿತಾ ಧನ್ಯವಾದ ಅರ್ಪಿಸಿದರು, ಕಾರ್ಯಕ್ರಮವನ್ನು ಕು. ಸುನೀತಾ ಕೆ.ಎಸ್ ಇವರು ನಿರೂಪಿಸಿದರು.
