ಬಂಟ್ವಾಳ:ಭೌಗೋಳಿಕವಾಗಿ ಇತರ ಜಿಲ್ಲೆಗಳಿಗೆ ಭಿನ್ನವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆರಳೆಣಿಕೆ ಕಾಲುವೆಗಳ ಪೈಕಿ ಇಲ್ಲಿನ ಮುತ್ತೂರು-ಕುಳವೂರು ‘ಫಲ್ಗುಣಿ’ ಕಾಲುವೆಗೆ ಬಲಾಢ್ಯರು ಮತ್ತು ರಾಜಕೀಯ ಪ್ರಭಾವಿಗಳಿಂದ ಅತಿಕ್ರಮಣ ಭೀತಿ ಎದುರಾಗಿದೆ.

5btl-Kaluveಕಳೆದ 1952ರಲ್ಲಿ ಅಂದಿನ ಸರ್ಕಾರವು ರೂ 19ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಸುಮಾರು 16 ಕಿ.ಮೀ.ಉದ್ದದ ಕಾಲುವೆ ಇಲ್ಲಿನ ಸುಮಾರು ಒಂದೂವರೆ ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸುವ ಮೂಲಕ ಗಮನ ಸೆಳೆದಿತ್ತು. ಈ ಕಾಲುವೆ ಸುತ್ತಲೂ ಅಂದಿನ ಸರ್ಕಾರವು ಸುಮಾರು 40ಮೀ. ಅಗಲಕ್ಕೆ ಜಮೀನು ಸ್ವಾಧೀನಪಡಿಸಿಕೊಂಡು 18 ಕಿ.ಮೀ.ತನಕ ನೀರು ಹರಿದು ರೈತರಿಗೆ ನಾಲ್ಕು ತಿಂಗಳು ಕೃಷಿ ಚಟುವಟಿಕೆಗೆ ಆಧಾರವಾಗಿತ್ತು.

5btl-Kaluve-2ಮಂಗಳೂರು ತಾಲ್ಲೂಕಿನ ಕಿಲೆಂಜಾರು, ಕುಳವೂರು, ಮುತ್ತೂರು ಗ್ರಾಮಗಳ ಮೂಲಕ ತೆಂಕ ಉಳಿಪಾಡಿ, ಬಡಗ ಉಳಿಪಾಡಿ ಗ್ರಾಮಗಳ ನೂರಾರು ಮಂದಿ ರೈತರು ಈ ಕಾಲುವೆ ನೀರನ್ನು ಅವಲಂಬಿಸಿದ್ದಾರೆ. ಇದಕ್ಕಾಗಿ ಕಿಲೆಂಜಾರು ಗ್ರಾಮದ ದೊಡ್ಡಳಿಕೆ ಎಂಬಲ್ಲಿ ‘ಫಲ್ಗುಣಿ’ ನದಿಗೆ ಕಿರು ಅಣೆಕಟ್ಟೆ ನಿರ್ಮಿಸಿ ಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯುಂತೆ ಮಾಡಲಾಗಿತ್ತು. ಅತ್ಯಾಧುನಿಕ ಯಂತ್ರೋಪಕರಣಗಳ ಸಹಾಯ ಇಲ್ಲದೆ ನಿರ್ಮಿಸಿದ್ದ ಕಾಲುವೆ ದುರಸ್ತಿ, ಮಣ್ಣು ತೆರವು ಮತ್ತು ನೀರಿನ ಸೋರಿಕೆ ತಡೆಗಟ್ಟುವೆ ನೆಪದಲ್ಲಿ ಪ್ರತೀ ವರ್ಷ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅನುದಾನವೂ ವಿನಿಯೋಗವಾಗುತ್ತಿದೆ.

5btl-Kaluve-4ಆದರೆ ಈ ಕಾಲುವೆ ಹಾದು ಹೋಗಿರುವ ವಿವಿಧೆಡೆ ಕೆಲವೊಂದು ಬಲಾಢ್ಯರು ಸಹಿತ ರಾಜಕೀಯ ಪ್ರಭಾವ ಹೊಂದಿದ ವ್ಯಕ್ತಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ಅಲ್ಲಲ್ಲಿ ಕಾಲುವೆ ಅತಿಕ್ರಮಣ ನಡೆಯುತ್ತಲೇ ಬಂದಿದೆ. ಕೆಲವೆಡೆ ಭಾರೀ ಗಾತ್ರದ ನೀರಿನ ಪೈಪು ಇದೇ ಕಾಲುವೆಗೆ ಅಡ್ಡವಾಗಿ ಅಲವಡಿಸಲಾಗಿದೆ. ಇದರಿಂದಾಗಿ 16ಕಿ.ಮೀ.ಉದ್ದದ ಕಾಲುವೆ ಉದ್ದಕ್ಕೂ ನೀರು ಹರಿಯದೆ ಕೇವಲ 8ಕಿ.ಮೀ.ಉದ್ದಕ್ಕೆ ನೋಣಾಲು ತನಕ ಮಾತ್ರ ನೀರು ಹರಿಯುತ್ತಿದೆ. ಇಲ್ಲಿನ ಕಾಲುವೆ ಮುಚ್ಚಿ ಕಾಂಕ್ರಿಟೀಕೃತ ರಸ್ತೆ ನಡೆಸುವ ಹುನ್ನಾರವೂ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಸಹಿತ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತಿತರರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಇನ್ನೊಂದೆಡೆ ಈ ಕಾಲುವೆಗೆ ಸಂಬಂಧಿಸಿದಂತೆ ನೋಣಾಲು ಎಂಬಲ್ಲಿ ಪಟ್ಟಾ ಜಮೀನಿನಲ್ಲಿಯೂ ಅತಿಕ್ರಮಣ ನಡೆಸಿ ಮಂಗಳೂರಿನ ಕೆ ಆರ್ ಐ ಡಿ ಎಲ್ ಸಂಸ್ಥೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ಮುಂದಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಸರ್ವಾಣಿ ಟಿ.ನಾಯ್ಕ್, ತ್ಯಾಗರಾಜ್ ಭಂಡಾರಿ ಮತ್ತಿತರರು ಮುತ್ತೂರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.ಇಲ್ಲಿ ಯಾವುದೇ ಕಾಂಕ್ರೀಟ್ ಕಾಮಗಾರಿ ನಡೆಸಿಲ್ಲ. ಕಾಮಗಾರಿ ಆರಂಭಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ನಿರಕ್ಷೇಪಣಾ ಪತ್ರ ನೀಡಿದರೆ ಮಾತ್ರ ಸಾಧ್ಯ ಎಂದು ಕೆ ಆರ್ ಐ ಡಿ ಎಲ್ ಸಂಸ್ಥೆ ಅಧಿಕಾರಿ ರಮೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *