ಮಂಗಳೂರು:ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಅಂಗ ಸಂಸ್ಥೆಯಾದಂತಹ ಮಂಗಳೂರಿನ ಕಂಕನಾಡಿಯಲ್ಲಿರುವ ಕೃಷಿ ವಿಜ್ಞಾನಕೇಂದ್ರದಲ್ಲಿ ಮಾರ್ಚ್5ರಂದುಉದ್ಯಮಶೀಲತೆ ಅಭಿವೃದ್ಧಿಕಾರ್ಯಕ್ರಮದಅಡಿಯಲ್ಲಿ“ವೈಜ್ಞಾನಿಕಮೀನು, ಕೋಳಿ ಮತ್ತು ಹಂದಿ ಸಾಕಾಣಿಕೆ”ತರಬೇತಿಕಾರ್ಯಕ್ರಮವನ್ನುಆಯೋಜಿಸಲಾಗಿತ್ತು. ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದದಕ್ಷಿಣಕನ್ನಡಪಶು ಸಂಗೋಪನಾ ಇಲಾಖೆಯಉಪ ನಿರ್ದೇಶಕರಾದ ಡಾ.ಜಯರಾಜ್‍ವರುಘಟ್ಟ ಪ್ರದೇಶದಲಿ ಪ್ರಚಲಿತವಾಗಿರುವ ಕೋಳಿ,ಹಂದಿ ಹಾಗೂ ಮೀನುಸಾಕಾಣೆಗೆ ಈಗ ಕರಾವಳಿಯಲ್ಲೂ ಆಸಕ್ತಿ ಹೆಚ್ಚುತ್ತಿದೆಯೆಂದು ಅಭಿಪ್ರಾಯಪಟ್ಟರು.

IMG_20200305_102715 ವೈಜ್ಞಾನಿಕವಾಗಿ ಸಾಕುವ ವಿಧಾನಗಳು, ಮರಿ ಮಾಡುವುದು, ಅಹಾರ ನೀಡುವಪದ್ಧತಿಗಳು, ರೋಗಗಳ ನಿರ್ವಹಣೆ, ಮತ್ತಿತರ ವಿವರಗಳನ್ನು ರೈತರಿಗೆನೀಡಿದರು.ಇದೇ ಸಂಧರ್ಬದಲ್ಲಿ ಕೃಷಿ ವಿಜ್ಞಾನಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ತರಾದಡಾ.ರಮೇಶ ಟಿ. ಜೆ.ರವರು ಸಮಗ್ರ ಕೃಷಿಯಿಂದಆರ್ಥಿಕಅಭಿವೃದ್ಧಿಗುವುದೆಂದುಅಭಿಪ್ರಾಯ ವ್ಯಕ್ತಪಡಿಸಿದರು.

IMG_20200305_102608ದಕ್ಷಿಣಕನ್ನಡಹಾಲು ಉತ್ಪಾದಕರಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಫ್ರಭಾಕರ್‍ರವರು ವಿವಿಧಜಾನುವಾರು ಮೇವುಗಳಕುರಿತು ಮಾಹಿತಿ ನೀಡಿದರು.ದಕ್ಷಿಣಕನ್ನಡದ48 ರೈತರು ಬಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಣಿರೋಗ ವಿಶ್ಲೇಷಣಾ ಪ್ರಯೋಗಾಲಯ ಮತ್ತು ಮಾಹಿತಿಕೇಂದ್ರದವಿಜ್ಞಾನಿ ಡಾ. ವಸಂತ ಶೆಟ್ಟಿ, ಪಶುವೈದ್ಯಾಧಿಕಾರಿಡಾ.ಆರಾಧ್ಯ ಹಾಗೂ ಕೃಷಿ ವಿಜ್ಞಾನಕೇಂದ್ರದ ಮೀನುಗಾರಿಕಾ ವಿಜ್ಞಾನಿ ಡಾ.ಎನ್. ಚೇತನ್‍ರವರು ಕೋಳಿ, ಹಂದಿ ಮತ್ತು ಮೀನು ಸಾಕಾಣೆಯ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಕೇಂದ್ರದಡಾ.ಮಲ್ಲಿಕಾರ್ಜುನ, ಡಾ.ನವೀನ್‍ಕುಮಾರ್ ಬಿ.ಟಿ., ಡಾ.ಕೇದಾರನಾಥ್, ಡಾ. ರಶ್ಮಿ ಅರ್.,ಹಾಗು ಇತರೆಸಿಬ್ಬಂದಿಗಳು ಉಪಸ್ತಿತರಿದ್ದರು.

By suddi9

Leave a Reply

Your email address will not be published. Required fields are marked *