ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಮಂಡಿಸಿದ 2020 -21 ಸಾಲಿನ ಆಯವ್ಯಯ ಕರ್ನಾಟಕ ರಾಜ್ಯದ ಸರ್ವೋತ್ತೋಮುಖ ಅಭಿವೃದ್ದಿಗೆ ಪೂರಕವಾದ ಬಜೆಟ್ ಆಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್. ಯು ತಿಳಿಸಿದ್ದಾರೆ.
ಕೃಷಿ ನೀರಾವರಿ, ಪ್ರವಾಸೋದ್ಯಮ ಜೊತೆಗೆ ಉದ್ಯೋಗ ಸೃಷ್ಟಿ ಗೆ ಅದ್ಯತೆ, ಮೀನುಗಾರರಿಗೆ ದ್ವಿಚಕ್ರ ವಾಹನ ನೀಡಿಕೆ, ಪಿ.ಯು. ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ನೀಡುವ ಮೂಲಕ ಶಿಕ್ಷಣಕ್ಕೆ ಮಹತ್ವವ, ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ, ಮೀನುಗಾರಿಕೆ ಮೂಲ ಸೌಕರ್ಯಕ್ಕೆ ಒತ್ತು. ,ಗ್ರಾಮೀಣ ರಸ್ಥೆಗಳ ಅಭಿವೃದ್ಧಿ, ಕುಡಿಯುವ ನೀರು ಯೋಜನೆಗೆ ಅನುದಾನ ನಿಗದಿ,ರೈತರ ಸಾಲಮನ್ನಾ ಬಾಕಿ ಹಣ ಬಿಡುಗಡೆ, ಸಣ್ಣ, ಅತೀ ಸಣ್ಣ ರೈತರಿಗೆ ಅನುಕೂಲ ಮಾಡಿಕೊಟ್ಟಿರುವುದುು ಸಹಿತ ಒಟ್ಟಾರೆಯಾಗಿ ಕರ್ನಾಟಕ ರಾಜ್ಯದ ಸರ್ವೋತ್ತೋಮುಖ ಅಭಿವೃದ್ಧಿ ಗೆ ಪೂರಕವಾದ ಆಯವ್ಯಯ ವನ್ನು ಮಂಡಿಸಿದ ಮುಖ್ಯಮಂತ್ರಿಯವರಿಗೆ ಶಾಸಕ ರಾಜೇಶ್ ನಾಯ್ಕ್. ಯು ಅಭಿನಂದನೆ ಸಲ್ಲಿಸಿದ್ದಾರೆ .