ಬಂಟ್ವಾಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಮಂಡಿಸಿರುವ ಬಜೆಟ್ ಲಭ್ಯವಿರುವ ಆದಾಯದಲ್ಲಿ ಸಮತೋಲಿತ ಮತ್ತು ಆಶಾದಾಯಕ ಬಜೆಟ್ ಆಗಿದೆ ಎಂದು ಬಂಟ್ವಾಳ ತಾಪಂ ಸದಸ್ಯ,ಬಿಜೆಪಿ ಮುಖಂಡ ಪ್ರಭಾಕರ ಪ್ರಭು ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಗಳಲ್ಲಿನ ಬಸವ ವಸತಿ ಮನೆಗಳ ನಿರ್ಮಾಣಕ್ಕಾಗಿ ವಸತಿ ನಿಗಮಕ್ಕೆ 1000 ಕೋಟಿ ರೂ., ಬಿಡುಗಡೆ ಕೃಷಿ, ತೋಟಗಾರಿಕೆಗೆ ಆದ್ಯತೆ, ಮೀನುಗಾರರಿಗೆ ದ್ವಿಚಕ್ರ ವಾಹನ ನೀಡಿಕೆ, ಪಿ.ಯು. ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ನೀಡುವ ಮೂಲಕ ಶಿಕ್ಷಣಕ್ಕೆ ಮಹತ್ವ.ಕೃಷಿ, ನೀರಾವರಿಗೆ ಪ್ರೋತ್ಸಾಹ.ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ.ಮೀನುಗಾರಿಕೆ ಮೂಲ ಸೌಕರ್ಯಕ್ಕೆ ಒತ್ತು. ,ಗ್ರಾಮೀಣ ರಸ್ಥೆಗಳ ಅಭಿವೃದ್ಧಿ, ಕುಡಿಯುವ ನೀರು ಯೋಜನೆಗೆ ಅನುದಾನ ನಿಗದಿ,ರೈತರ ಸಾಲಮನ್ನಾ ಬಾಕಿ ಹಣ ಬಿಡುಗಡೆ, ಸಣ್ಣ, ಅತೀ ಸಣ್ಣ ರೈತರಿಗೆ ಅನುಕೂಲ,ಎಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಐ.ಸಿ.ಯು.ಅಳವಡಿಕೆ,ಕ್ರೈಸ್ತ ಸಮದಾಯ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಒದಗಿಸಿರುವುದು ಅಭಿನಂನೀಯವಾಗಿದೆ. ರಾಜ್ಯದ ಪ್ರಸ್ತುತ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಅಶದಾಯಕ ಬಜೆಟ್ ಮಂಡಿಸಿದ್ದಾರೆ ಎಂದುಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
