ಕಿನ್ನಿಗೋಳಿ:ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಮುಲ್ಕಿ, ಮಂಗಳೂರು ತಾಲೂಕು, ಸಹಯೋಗದಲ್ಲಿ ಮುಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ ಶಾಸಕ ಉಮಾನಾಥ್ ಎ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ಶುಕ್ರವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತುಗುತ್ತಕಾಡು ರಸ್ತೆ ಬದಿಗಳಲ್ಲಿ ಅಲಲ್ಲಿ ಕಸ ತ್ಯಾಜ್ಯಗಳು ತುಂಬಿ ಹೋಗುತ್ತಿವೆ, ಕಿನ್ನಿಗೋಳಿ ಬಸ್ ನಿಲ್ಡಾಣದಲ್ಲಿ ಪುಟ್ಪಾತ್ ಹಾಗೂ ಪಾರ್ಕಿಂಗ್ ಸಮಸ್ಯೆ, ಬಾಡಿಗೆ ಕಟ್ಟಡಗಳನ್ನು ಕಟ್ಟುವಾಗ ನಿಯಮಾವಳಿಗಳನ್ನು ಗಾಳಿಗೆ ತೂರದಂತೆ ನೋಡಿಕೊಳ್ಳಬೇಕು.
ಅಂತರಾಜ್ಯದಿಂದ ಬಂದವರಿಂದ ಸೂಕ್ತ ಮಾಹಿತಿಯನ್ನು ಪಂಚಾಯಿತಿ ಹಾಗೂ ಪೋಲೀಸ್ ಇಲಾಖೆ ಪಡೆದು ಮುಂಜಾಗ್ರತೆ ವಹಿಸಬೇಕು ಎಂದು ಸ್ಟ್ಯಾನಿ ಹಾಗೂ ಗಂಗಾಧರ ಸಲಹೆ ನೀಡಿದರು. ಕೃಷಿ ಇಲಾಖೆಯ ಅಬ್ದುಲ್ ಬಷೀರ್, ಕಂದಾಯ ಇಲಾಖೆಯ ಸುಜೀತ್, ಸುನೀಲ್ ಕುಮಾರ್, ಇಂಜೀನಿಯರ್ ವಿಶ್ವನಾಥ, ಮತ್ತಿತರರು ಇಲಾಖಾ ಮಾಹಿತಿ ನೀಡಿದರು.ಕಿನ್ನಿಗೋಳಿಗೆ ಆರೋಗ್ಯ ಉಪಕೇಂದ್ರ, ಸಮರ್ಪಕ ಕುಡಿಯುವ ನೀರು, ರಸ್ತೆ ಬೇಡಿಕೆ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭ ವೃದ್ಯಾಪ್ಯ ವೇತನ ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ಸೌಲಭ್ಯಗಳನ್ನು ಅರ್ಹ ಫಲಾನುಬಾವಿಗಳಿಗೆ ನೀಡಲಾಯಿತು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜತಾ ಪೂಜಾರಿ, ದ.ಕ. ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ. ಪಂ. ಸದಸ್ಯರಾದ ದಿವಾಕರ ಕರ್ಕೇರ, ಶರತ್ ಕುಬೆವೂರು, ಪಂಚಾಯಿತಿ ಸದಸ್ಯರು, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಕಾರ್ಯದರ್ಶಿ ಶ್ರೀಕಾಂತ್ ಸಿಂಪಿಗೇರ ಮತ್ತಿತರರು ಉಪಸ್ಥಿತರಿದ್ದರು.
