ಕೈಕಂಬ:ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ ಶತಚಂಡಿಕಾಯಾಗ ಹಾಗೂ ಧರ್ಮನೇಮೋತ್ಸವದ ಪೂರ್ವಭಾವಿ ಯಾಗಿ ಒಡ್ಡೂರು ಫಾರ್ಮ್ ಹೌಸ್ ನಲ್ಲಿ ಫೆ.20 ರಂದು ಗುರುವಾರ ಪಲ್ಕೆ ವೇದಮೂರ್ತಿ ರವೀಶ ಭಟ್ ನೇತ್ರತ್ವದಲ್ಲಿ ಹೋಮ ಹವಾಣಾದಿಗಳು ನಡೆಯಿತು.
ತೋರಣ ಮಹೂರ್ತ, ಹಾಳೆ ಮರ ಹಾಗೂ ಬಾಳೆಗೊನೆ ಕಡಿಯುವ ಮಹೂರ್ತ ನೆರವೇರಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಉಳಿಪಾಡಿಗುತ್ತು ಸರೋಜಿನಿ ಆರ್ ನಾಯ್ಕ್, ಉಷಾ ಆರ್ ನಾಯ್ಕ್ , ಕ್ರಷ್ಣರಾಜ್ ಮಾರ್ಲ , ಮುರಳಿಧರ ಶೆಟ್ಟಿ , ಅಭಿಲಾಶ್ ಚೌಟ ಉಪಸ್ಥಿತರಿದ್ದರು.




