ಬಂಟ್ವಾಳ: ಜೀರ್ಣೋದ್ಧಾರ ಗೊಳ್ಳುತ್ತಿರುವ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಾಸ್ತು ಶಾಸ್ತ್ರಜ್ಞ ಪ್ರಸಾದ್ ಬಟ್ ಮುನಿಯಂಗಳ ಭೇಟಿ ನೀಡಿ ದೇವಳದ ಆಡಳಿತ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿದರು.
ಸಜಿಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಪುನರ್ ನಿರ್ಮಾಣಗೊಳ್ಳುತ್ತಿದ್ದು, ನೂತನವಾಗಿ ಗರ್ಭಗುಡಿ ,ತೀರ್ಥ ಮಂಟಪ, ಸುತ್ತುಪೌಳಿಯನ್ನು ವಾಸ್ತು ಪ್ರಕಾರ ಪುನರ್ ನಿರ್ಮಿಸಲು ಸೂಕ್ತ ಸಲಹೆ ಸೂಚನೆಯನ್ನು ಅವರು ಈ ಸಂದರ್ಭ ನೀಡಿದರು. ಪ್ರಮುಖರಾದ ವೆಂಕಟೇಶ್ವರ ಭಟ್ ಮುಳ್ಳುಂಜ , ಕೆ ರಾಧಾಕೃಷ್ಣ ಆಳ್ವ, ಸತ್ಯನಾರಾಯಣ ನಾಯಕ್, ಪ್ರದೀಪ್ ಶೆಟ್ಟಿ, ಸಜೀಪ ಮಾಗಣೆಯ ತಂತ್ರಿಗಳಾದ ಎಂ ಸುಬ್ರಹ್ಮಣ್ಯ ಭಟ್, ಕಿಶನ್ ಶೇಣವ, ಮನೋರಂಜನ್ ಶೇಕ ,ಕೇಶವ ಕುಂದರ್, ಪರಮೇಶ್ವರ ಸಪಲ್ಯ, ನಿತಿನ್ ಅರಸ, ದೀಪಕ್, ಯಶವಂತ ದೇರಾಜೆ ಉಪಸ್ಥಿತರಿದ್ದರು.
