ಮುಂಬಯಿ: ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ನಾಲ್ವಡಿ ಶ್ರೀಕೃಷ್ಣರಾಜಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಇಂದಿಲ್ಲಿ ಬುಧವಾರ ಭಾರತ ಸರ್ಕಾರದ ಯುವ ಕಾರ್ಯಾಲಯ, ನೆಹರೂ ಯುವ ಕೇಂದ್ರ ಮತ್ತು ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಅಂಗವಾಗಿ ಸಾಂಸ್ಕøತಿಕ ಕಲೆಗಳ ಹಬ್ಬ ಆಯೋಜಿಸಲಾಗಿದ್ದು ಕರ್ನಾಟಕ ರಾಜ್ಯ ಸರ್ಕಾರದ ನೂತನ ಪೌರಾಢಳಿತ,
ರೇಷ್ಮೆ ಮತ್ತು ತೋಟಗಾರಿಕೆ ಖಾತೆ ಸಚಿವರಾದ ಡಾ| ನಾರಾಯಣ ಗೌಡ ಅವರಿಗೆ ತಹಶೀಲ್ದಾರ್ ಎಂ.ಶಿವಮೂರ್ತಿ ಅಧಿಕೃತ ಆಹ್ವಾನ ನೀಡಿ ದೇವಕಿ ನಾರಾಯಣ ಗೌಡ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.ಸಚಿವ ನಾರಾಯಣ ಗೌಡ ಅವರ ಒತ್ತಾಸೆಯ ಮೇರೆಗೆ ನಡೆಯುತ್ತಿರುವ ಸಾಂಸ್ಕøತಿಕ ಕಲೆಗಳ ಜಾತ್ರೆ ಕಾರ್ಯಕ್ರಮದಲ್ಲಿ ದೇಶದ 19 ರಾಜ್ಯಗಳ ನುರಿತ ಕಲಾವಿದರು ಆಯಾ ರಾಜ್ಯಗಳ ಸಂಸ್ಕøತಿ ಇತಿಹಾಸ ಹಾಗೂ ಕಲೆಯನ್ನು ಪ್ರತಿಬಿಂಬಿಸುವ ನೃತ್ಯಗಳು ಹಾಗೂ ಸಾಂಸ್ಕøತಿಕ ಪ್ರದರ್ಶನ ನೀಡಲಿದ್ದಾರೆ.
