ಇಂಚೇನ್ (ದ.ಕೊರಿಯಾ): 17ನೇ  ಏಷ್ಯಾನ್​ ಗೇಮ್ಸ್​’ನಲ್ಲಿ ಭಾರತ ಹಾಕಿ ಪಂದ್ಯಾಟದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದು 16 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕವನ್ನು ತನ್ನ ಮುಡಿಗೇರಿಸಿತು.  ಪಾಕ್​ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ ಭಾರತ 2016ರ ರಿಯೋ ಒಲಂಪಿಕ್ಸ್​ ಅರ್ಹತೆ ಪಡೆದಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

hocky1

hocky2

hocky3

hocky4

hocky5

ಕೇವಲ ನಾಲ್ಕನೇ ನಿಮಿಷದಲ್ಲಿ ಗೋಲ್​ ಹೊಡೆಯುವ ಮೂಲಕ ಮೊಹ್ಮದ್​ ರಿಜ್ವಾನ್ ಒತ್ತಡ ಹೇರಿದರು. ಎರಡನೇ ಕ್ವಾರ್ಟರ್​’ನಲ್ಲಿ ಭಾರತದ ಕೊತಾಜಿತ್​ ಸಿಂಗ್​ 27ನೇ ನಿ​ಮಿಷದಲ್ಲಿ ಗೋಲ್​ ಹೊಡೆಯುವ ಮೂಲಕ ಸಮಬಲ ಸಾಧಿಸುವಲ್ಲಿ ಕಾರಣರಾದರು. ಮೂರು ಮತ್ತು ನಾಲ್ಕನೇ ಕ್ವಾರ್ಟರ್​’ನಲ್ಲಿ ಉಭಯ ತಂಡಗಳು ಯಾವುದೇ ಗೋಲ್​ ಹೊಡೆಯದ ಕಾರಣ ಪಂದ್ಯ 1-1 ಗೋಲ್​’ನಿಂದ ಸಮವಾಯ್ತು.  ಆನಂತರ ಪೆನಾಲ್ಟಿ ಶೂಟೌಟ್​’ನಲ್ಲಿ  ಭಾರತ ಅದ್ಭುತ ಪ್ರದರ್ಶನ ನೀಡಿತು. 4-2 ರಿಂದ ಜಯ ಸಾಧಿಸಿತು. ಗೋಲ್​ ಕೀಪರ್​ ಶ್ರೀಜೇಶ್​ 2 ಗೋಲ್’​ಗಳನ್ನು ಉಳಿಸುವ ಮೂಲಕ ಜಯದ ರೂವಾರಿಯಾದರು.

By suddi9

Leave a Reply

Your email address will not be published. Required fields are marked *