ನಾಗಪುರ: ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಭಾರತವನ್ನು ವಿಶಿಷ್ಟ ರೂಪದಲ್ಲಿ ಜಗತ್ತಿನಲ್ಲಿ ನಿಲ್ಲಿಸಬೇಕು. ಸಮಾಜದಲ್ಲಿ ಬದಲಾವಣೆ ತರುವ ಅಗತ್ಯವಿದೆ. ನಾವು ಋಷಿಮುನಿಗಳು ಆದರ್ಶ ಪ್ರಾಯರಾಗಿದ್ದಾರೆ. ನಾವು ಯಾವುದೇ ಮಂದಿರಗಳನ್ನು ನಿರ್ಮಿಸಿಲ್ಲ. ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಆರ್ ಎಸ್ ಎಸ್ ನ ಸರಸಂಘಚಾಲಕ ಮೋಹನ್ ಜೀ ಭಾಗವತ್ ಹೇಳಿದರು.
ಅವರು ಆರ್.ಎಸ್.ಎಸ್.ನ ಸಂಸ್ಥಾಪನಾ ದಿನವಾದ ಇಂದು ಅದರ ಮುಖ್ಯ ಶಾಖೆ ನಾಗಪುರದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತಾಡಿದರು.
ಬಳಿಕ ಮಾತಾಡಿದ ಅವರು ಎಲ್ಲರನ್ನು ಸ್ವೀಕರಿಸಿ, ಎಲ್ಲರನ್ನೂ ಗೌರವಿಸಿ ಎಂದು ಸ್ವಯಂಚಾಸೇವಕರಿಗೆ ಆದರ್ಲಶದ ಮಾತುಗಳನ್ಕನು ನುಡಿದರು.
ಇನ್ನು ಏಷ್ಯನ್ ಗೇಮ್ಸ್’ನಲ್ಲಿ ಭಾಗವಹಿಸಿರುವ ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಿದರು. ಮಂಗಳಯಾನ ವಿಜ್ಞಾನ ಲೋಕದ ದೊಡ್ಡ ಸಾಧನೆ ಎಂದು ಹೇಳಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕೊಂಡಾಡಿದರು. ಮೋದಿ ಸರ್ಕಾರ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ಯೋಜನೆ ಅತ್ಯುತ್ತಮವಾಗಿತ್ತು ಎಂದರು.
ಡಿ.ಡಿ.ಯಲ್ಲಿ ನೇರಪ್ರಸಾರಕ್ಕೆ ಗುಹಾ ಆಕ್ಷೇಪ
ಇನ್ನು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಜೀ ಭಾಗವತ್ ಅವರ ಭಾಷಣ ಡಿಡಿ ವಾಹಿನಿಯಲ್ಲಿ ನೇರಪ್ರಸಾರವಾಗಿದೆ. ಈ ಹಿನ್ನೆಲೆಯಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಆರ್.ಎಸ್.ಎಸ್ ಒಂದು ಹಿಂದೂ ಪರ ಸಂಘಟನೆಯಾಗಿದೆ. ಮುಂದೆ ಬೇರೆ ಧರ್ಮದವರು ಇದಕ್ಕಾಗಿ ಪಟ್ಟು ಹಿಡಿಯುತ್ತಾರೆ. ಇದು ತುಂಬಾ ಅಪಾಯಕಾರಿ ಎಂದು ರಾಮಚಂದ್ರ ಗುಹಾ ಟ್ವೀಟ್ ಮಾಡಿದ್ದಾರೆ.

