ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ(ನಿ) ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಸಮಾನ ಮನಸ್ಕರ ಒಕ್ಕೂಟದ ಎಲ್ಲ 12 ಮಂದಿ ಭರ್ಜರಿ ಗೆಲುವು ಸಾಧಿಸಿದರು.ಗುರುಪುರದ ಶ್ರೀ ಸತ್ಯದೇವತೆ ಸಭಾಗೃಹದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮಂಗಳೂರು ಎಆರ್ಸಿಎಸ್ ಉಸ್ತುವಾರಿ ಅಧಿಕಾರಿ ತ್ರಿವೇಣಿ ರಾವ್ ಕೆ ಫಲಿತಾಂಶ ಪ್ರಕಟಿಸಿದರು.

ವಿಜೇತರು ಪಡೆದ ಮತ :
ಸಾಲಗಾರ ಸಾಮಾನ್ಯ : ಉದಯ ಭಟ್ ಜಿ ಎಂ(611), ಓಂ ಪ್ರಕಾಶ್ ಶೆಟ್ಟಿ(551), ಜಿ ಕೆ ಕಿಟ್ಟಣ್ಣ ರೈ(556), ವಿನೋದ್ ಮಾಡ(446), ಸಚಿನ್ ಕುಮಾರ್ ಅಡಪ(495), ಸಾಲಗಾರ ಹಿಂದುಳಿದ ಪ್ರವರ್ಗ `ಎ’ಸ್ಥಾನ : ಕಿಶೋರ್ ಕುಮಾರ್(460), ಶೀನ ಕೋಟ್ಯಾನ್ ಜಿ(492), ಸಾಲಗಾರ ಮಹಿಳಾ ಮೀಸಲು ಸ್ಥಾನ : ನಳಿನಾಕ್ಷಿ(504), ಲತಾ ಆರ್ ಶೆಟ್ಟಿ(443), ಸಾಲಗಾರ ಪರಿಶಿಷ್ಟ ಮೀಸಲು ಸ್ಥಾನ: ಸೋಮಯ್ಯ(440), ಸಾಲಗಾರ ಪರಿಶಿಷ್ಟ ಪಂಗಡ ಮೀಸಲು ಸ್ಥಾನ : ರಾಜೇಶ್(449), ಸಾಲಗಾರರಲ್ಲದ ಸ್ಥಾನ: ಶ್ರೀನಿವಾಸ ಸುವರ್ಣ(245) ವಿಜೇತರಾದರು.


