ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಇದರ ನೂತನ ಅಧ್ಯಕ್ಷ ರಾಗಿ ಪದ್ಮನಾಭ ಬಿ. ಹಾಗೂ ಉಪಾಧ್ಯಕ್ಷರಾಗಿ ಭವಾನಿಶಂಕರ್ ರಾವ್ ಕೇದಗೆ ಅವರು ಆಯ್ಕೆಯಾಗಿದ್ದಾರೆ.  ನಿರ್ದೇಶಕರಾಗಿ ಎಂ.ಮಹಾಬಲ ಶೆಟ್ಟಿ, ಕೆ.ಎನ್ ಶೇಖರ್, ಎಂ.ಕರುಣೇಂದ್ರ, ಮನೋಹರ, ಪ್ರಕಾಶ್ , ಸದಾಶಿವ ಶೆಣ್ಯೆ, ರಾಮಚಂದ್ರ ಗೌಡ, ವಿಠಲ ಪುಂಡಿಬೈಲು, ಹರೀಶ್ ನಾಯ್ಕ್, ಲಕ್ಮೀ ವಿ.ಪ್ರಭು, ಪದ್ಮಾವತಿ ಅವರು ಆಯ್ಕೆಯಾಗಿದ್ದಾರೆ.
IMG_20200130_164034
ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ 2020 – 25 ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಬೆಂಬಲಿತ 13 ಅಭ್ಯರ್ಥಿಗಳು ನಿರ್ದೇಶಕರಾಗಿ ಚುನಾಯಿತರಾಗಿದ್ದರು. ಈಚೆಗೆ  ಸಂಘದ  ಕಚೇರಿಯಲ್ಲಿ ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತ್ತು.
IMG_20200130_164044
ಈ ಸಹಕಾರಿ ಸಂಘ ಕ್ಕೆ ಬಿಜೆಪಿ ಮುಖಂಡ,ಹಿರಿಯ ಸಹಕಾರಿ ಧುರೀಣ ಜಿ.ಆನಂದ ಅವರು ಅಧ್ಯಕ್ಷರಾಗಿ ಕಳೆದ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಅಲ್ಪಕಾಲದ  ಅಸೌಖ್ಯದಿಂದ ಅವರು ಇತ್ತೀಚೆಗೆ ನಿಧನ ಹೊಂದಿದ್ದರು.

 

By suddi9

Leave a Reply

Your email address will not be published. Required fields are marked *