ಬಂಟ್ವಾಳ: ಇರಾ ಗ್ರಾಮ ಪಂಚಾಯತ್, ಜನಶಿಕ್ಷಣ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಹಿಳಾ ಜಾಗೃತಿ ಅಭಿಯಾನದ ಸಲುವಾಗಿ ಬೀದಿನಾಟಕ ಕಾರ್ಯಕ್ರಮವನ್ನು ಇರಾ ಕಂಚಿನಡ್ಕಪದವು ಜನವಸತಿ ಕಾಲೋನಿಯಲ್ಲಿ ಗುರುವಾರ ನಡೆಯಿತು. ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಅವರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಲು ತಮ್ಮ ಹಕ್ಕಿನ ಬಗ್ಗೆ ಜಾಗೃತಿ ಹೊಂದುವುದು ಅವಶ್ಯಕವಾಗಿದೆ ಎಂದರು.

17-16-39-IMG-20200130-WA0012-768x449
ಮಂಗಳೂರಿನ ದಯಾನಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಹಿಳಾ ಜಾಗೃತಿ ಹಾಗೂ ಸ್ವಚ್ಛತೆಯ ಬಗ್ಗೆ ಇರಾ ಕೆಂಜಿಲ ಶಾಲೆಯಲ್ಲಿ ಬೀದಿನಾಟಕ ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ್ ಸದಸ್ಯರಾದ ತುಳಸಿ ಪೂಜಾರಿ, ಸವಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲಾ, ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಭವಿತ್ ಕುಮಾರ್, ಗ್ರಾಮಸ್ಥರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಜನಶಿಕ್ಷಣ ಟ್ರಸ್ಟ್ ನ ಚೇತನ್ ಸ್ವಾಗತಿಸಿ, ಕೆಂಜಿಲ ಶಾಲಾ ಮುಖ್ಯೋಪಾದ್ಯಯ ಹರೀಶ್ ವಂದಿಸಿದರು.

By suddi9

Leave a Reply

Your email address will not be published. Required fields are marked *