ಕೈಕಂಬ: ಮಹತ್ಮಾಗಾಂಧೀಜಿ ಅಹಿಂಸೆಯ ಅವದೂತರಾಗಿದ್ದು ತನ್ನ ಚಿಂತನೆಗಳಿಂದ ಹಾಗೂ ಕಾರ್ಯಗಳಿಂದ ಅಹಿಂಸೆ ಪಾಠವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ ಎಂದು ಸೆಕಂಡರಿ ಎಜುಕೇಷನ್ ಬೆಂಗಳೂರು ಇದರ ಫಿಲೋಮಿನಾ ಲೋಬೋ ಹೇಳಿದ್ದಾರೆ.
ಅವರು ಇಂದು ಕುಲಶೇಖರದ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆಯಲ್ಲಿ ನಡೆದ ಮಹಾತ್ಮಾಗಾಂಧಿಜಿ ಜಯಂತಿ ಕುರಿತಾಗಿ ಮಕ್ಕಳನ್ನುದ್ದೇಶಿಸಿ ಮಾತಾಡುತ್ತಿದ್ದರು.
ನಂತರ ಮಾತಾಡಿದ ಅವರು ಸ್ವಚ್ಛತೆ ಎಂಬುದು ದೇವರನ್ನು ಹತ್ತಿರ ಮಾಡುವಂತಹಾ ಸಾಧನವಾಗಿದೆ ಎಂದು ಕಾರ್ಮಿಕ ಸಮುದಾಯದ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ. ಗಾಂಧೀಜಿಯಂತೆ ಧನಾತ್ಮಕ ಚಿಂತನೆಗಳ ಮೂಲಕ ವಿದ್ಯಾರ್ಥಿಗಳು ಅವರು ಹಾಕಿದಹೆಜ್ಜೆಯಲ್ಲೇ ನಡೆಯಬೇಕು ಎಂದು ಅವರು ವಿದ್ಯಾರ್ಥಿಗಳಲ್ಲಿ ಕರೆ ನೀಡಿದರು.
ಸಂಯೋಜಕ ಮಂಜುನಾಥ್, ಲಕ್ಷ್ಮೀನಾರಾಯಣ, ಫ್ರಾನ್ಸಿಸ್, ಹೆಲ್ಡಾ ಪಿಂಟೋ, ಸುನಿಲ್ ಮೊಂತೆರೋ, ಮುಖ್ಯೋಪಧ್ಯಾಯಿನಿ ಸಿಸಿಲಿಯಾ ಮೆಂಡೋನ್ಸಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಂದ ಸಂಸ್ಕೃತಿ ಕಾರ್ಯಕ್ರಮ, ಸ್ವಚ್ಛತಾ ಕಾರ್ಯಕ್ರಗಳು ನಡೆದವು.










It is a great occasion to recall and imbibe the great values taught by Mahatma Gandhiji. Thanks for the opportunity.
congratulations dear students for your enthusiasm during ‘shramadan’
Good Work By Students