ಮೂಡುಬಿದಿರೆ:ಶ್ರೀ ಕ್ಷೇತ್ರ ಕಂದಿರು ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನ ಬ್ರಹ್ಮಕಲಶೋತ್ಸವ, ಚಂಡಿಕಾಯಾಗ ಹಾಗೂ ಪರಿವಾರ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ಜರುಗಿತು.

ಶಿಮುಂಜೆಗುತ್ತು ಎಸ್. ಡಿ. ಸಂಪತ್ ಸಾಮ್ರಾಜ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ವಿ. ಶೆಟ್ಟಿ, ಸಂಚಾಲಕ ಪದ್ಮನಾಭ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರುಕ್ಕಯ್ಯ ಪೂಜಾರಿ, ಸಂಚಾಲಕ ಪಿ.ಕೆ.ರಾಜು ಪೂಜಾರಿ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು.
ಶ್ರೀ ಕ್ಷೇತ್ರ ಕಂದಿರು ಆಡಳಿತ ಮೊಕ್ತೇಸರ ಸೋಮನಾಥ ಶಾಂತಿ, ಪದಾಧಿಕಾರಿಗಳಾದ ಗೋಪಿನಾಥ ಎಸ್, ವಿಶ್ವನಾಥ ಕೋಟ್ಯಾನ್ ಹನ್ನೇರು, ಮಹಾವೀರ ಮುದ್ಯ, ರಾಘವ ಪಿ. ಸುವರ್ಣ, ಲಕ್ಷ್ಮಣ ಕೋಟ್ಯಾನ್ ಅಳಿಯೂರು, ಶೀನ ಪೂಜಾರಿ ಅಳಿಯೂರು, ಶಿವಪ್ಪ ಎಲ್. ಪೂಜಾರಿ ಡೆಂಜಾರು, ಶಶಿಕುಮಾರ್ ಕಂದಿರು, ಹರೀಶ್ ಆಚಾರ್ಯ ನೆಲ್ಲಿಕಾರು, ನೆಲ್ಲಿಕಾರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.
