ಕಾರ್ಕಳ : ಹಿಂದೂ ಸಂಸ್ಕೃತಿಯು ಜ್ಞಾನವನ್ನು ಕೊಡುತ್ತಿದ್ದು, ಪಾಶ್ಚಾತ್ಯ ಸಂಸ್ಕೃತಿಯು ಶಿಕ್ಷಣದ ವ್ಯಾಪಾರೀಕರಣ ಮಾಡುತ್ತಿದೆ. ಮಗು ಕೇಂದ್ರಿತವಾದ ಚಟುವಟಿಕೆಯುಕ್ತವಾದ ಸಮಾಜ ಪೋಷಿತವಾದ ಈ ಸೂತ್ರಗಳಿಂದ ಶಾಲೆ ಹಾಗೂ ವಿದ್ಯಾರ್ಥಿಗಳ ಬದುಕನ್ನು ರೂಪಿಸಬಹುದು.  ಎಂದು ವಿದ್ಯಾಭಾರತಿ ಪ್ರಾಂತ ಸಂಚಾಲಕರಾದ ವಸಂತ ಮಾಧವ ಇವರು ಎಳ್ಳಾರೆ ಶ್ರೀ ಜನಾರ್ಧನ ಪೂರ್ವ ಪ್ರಾಥಮಿಕ ಶಾಲಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

WhatsApp Image 2020-01-15 at 14.56.18
ಹೆಬ್ರಿ ಅಮೃತಭಾರತಿಯ ಆಡಳಿತ ಮಂಡಳಿ ಕಾರ್ಯದರ್ಶಿ ಗುರುದಾಸ್ ಶೆಣೈ ಮಾತನಾಡಿ ಸಂಸ್ಕಾರ ಯುತವಾದ ಶಿಕ್ಷಣದಿಂದ ಮನಸ್ಸು ಒಂದಾಗುತ್ತದೆ. ಇದು ಸಮಾಜದ ಅಭಿವೃದ್ಧಿಗೆ ಪೂರಕವಾದುದು ಎಂದು ಹೇಳಿದರು . ಈ ಸಂಧರ್ಭ ವೇದಿಕೆಯಲ್ಲಿ ಜನಾರ್ಧನ ಶಾಲಾ ಸಂಚಾಲಕರಾದ ನಂದಕುಮಾರ್, ಎಳ್ಳಾರೆ ಜನಾರ್ಧನ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ದಿನೇಶ್ ಕಿಣಿ, ಕಡ್ತಲ ಗ್ರಾ. ಪಂ. ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

WhatsApp Image 2020-01-15 at 14.56.19

ಕಾರ್ಯಕ್ರಮವನ್ನು ನವೀನ್. ಆರ್. ಭಟ್ ನಿರೂಪಿಸಿದರು. ಟ್ರಸ್ಟ್ ನ ಕಾರ್ಯದರ್ಶಿ ಸಂತೋಷ್ ಹೆಗ್ಡೆ ಸ್ವಾಗತಿಸಿ,ಶಾಲಾ ನಿಯೋಜಿತ ಮುಖ್ಯೋಪಾಧ್ಯಾಯರಾದ ದಯಾನಂದ ನಾಯಕ್ ಧನ್ಯವಾದವಿತ್ತರು.ಶಾಲಾ ಶಿಕ್ಷಕರು ಸಹಕರಿಸಿದರು.

By suddi9

Leave a Reply

Your email address will not be published. Required fields are marked *