ಗುರಿ ನಿರ್ಣಯಕ್ಕೆ ಮಾರ್ಗದರ್ಶನ ಅಗತ್ಯ: ಕರ್ವಾಲೋ
ಅಜೆಕಾರು: ಮಕ್ಕಳು ಯಾವುದೇ ಮಾಧ್ಯಮದಲ್ಲಿ ಕಲಿಯುತ್ತಿದ್ದರೂ ಅವರಿಗೆ ಬದುಕಿನ ಗುರಿ ನಿರ್ಣಯಕ್ಕೆ ಮಾರ್ಗದರ್ಶನ ಅಗತ್ಯ ಇದೆ ಎಂದು ಯುವ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲೋ ಹೇಳಿದರು.
ಮಕ್ಕಳ ಸಾಧನೆಗೆ ಸಕಾಲಿಕ ಪ್ರೋತ್ಸಾಹ ಅಗತ್ಯವಾಗಿದ್ದು, ಈಗ ಮಕ್ಕಳ ಬೆಳವಣಿಗೆಗೆ  ವಿಫುಲ ಅವಕಾಶವಿದೆ ಎಂದರು.
??????????
ಅವರು ಅಜೆಕಾರಿನ ೧೧೧ ವರ್ಷದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ತಿಂಗಳ ಸಂಭ್ರಮ-೮ ರ ಸಂಪನ್ಮೂಲ ವ್ಯಕ್ತಯಾಗಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಈ ತಿಂಗಳ ಸಂಭ್ರಮ ವರವಾಗಿ ಬಂದಿದ್ದು ಈ ಶಾಲೆಯ ಹಳೆ ವಿದ್ಯಾರ್ಥಿ ಡಾ.ಶೇಖರ ಅಜೆಕಾರು ಅವರ ಈ ಪ್ರಯತ್ನ ಕನ್ನಡ ಮಾಧ್ಯಮದ ಹೆತ್ತವರಲಿ ಮತ್ತ್ಲು ಮಕ್ಕಳಲ್ಲಿ ಹೊಸ ಹುರುಪು ತುಂಬಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮಖ್ಯೋಪಾಧ್ಯಾಯ ಎಸ್.ಆರ್. ವಿಶ್ವನಾಥ ಹೇಳಿದರು.
ಸ್ಥಳೀಯ ಪ್ರತಿಭೆ ಉದಯ ಪಿ. ಅಜೆಕಾರು ಸಂಗೀತ ಕಾರ್ಯಕ್ರಮ ನೀಡಿದರು. ಪ್ರಭು ಮತ್ತು ಉದಯ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.  ಶಾಲಾ ಶಿಕ್ಷಕಿ ಚರಿತ್ರಾ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯ ಶ್ರೀ ಎಸ್. ಅಜೆಕಾರು ಅತಿಥಿಗಳಾಗಿದ್ದರು. ವಿದ್ಯಾರ್ಥಿ ನಾಯಕ  ಯಶಸ್ ತಂತ್ರಿ ವಂದಿಸಿದರು. ಕಾರ್ಯಕ್ರಮದ ನಿರ್ದೇಶಕ, ಸಂಯೋಜಕ ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಶೇಖರ ಅಜೆಕಾರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳು ಒಂದು ಗಂಟೆಗಳ ಕಾಲ ಪ್ರತಿಭಾ ಪ್ರದರ್ಶನ ಮಾಡಿದರು.

By suddi9

Leave a Reply

Your email address will not be published. Required fields are marked *