ಕುಪ್ಪೆಪದವು: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಬಾರ್ದಿಲ ದೇವರಗುಡ್ಡೆ ಸಾಂಬಸದಾಶಿವ ದೇವಸ್ಥಾನ ಸಂಪೂರ್ಣ ಜೀರ್ಣೋದಾರದ ಕಾರ್ಯಗಳು ಭರದಿಂದ ಸಾಗುತ್ತಿದ್ದು ಭವ್ಯ ದೇಗುಲ ನಿರ್ಮಾಣವಾಗಲಿದೆ.
ಕ್ಷೇತ್ರಪರಿಚಯ:ತುಳುನಾಡನ್ನು ಸೃಷ್ಟಿಸಿದ ಮಹಾಮುನಿ ಪರಶುರಾಮ ಸಹಿತ ಹಲವು ಮುನಿಶ್ರೇಷ್ಠರು ತಪಸ್ಸು, ಯಜ್ಞಯಾಗಾದಿಗಳನ್ನು ಮಾಡಿದ ಪುಣ್ಯಬೂಮಿ ಯಾದ ಬಾರ್ದಿಲ ಎಂಬಲ್ಲಿ ಸಾವಿರಾರು ವರ್ಷಗಳ ಹಿಂದೆ ಇಲ್ಲಿನ ನಿವಾಸಿಗಳಿಗೆ ಕಷ್ಟ ಕೋಟಲೆಗಳು ಎದುರಾದಾಗ, ಇಲ್ಲಿರುವ ಎತ್ತರದ ಗುಡ್ಡೆಯಲ್ಲಿ ದೈವೀ ಶಕ್ತಿ ನೆಲೆಯಾಗಿದ್ದು ಆ ಶಕ್ತಿಯನ್ನು ಆರಾಧಿಸಿಬೇಕೆಂದು ಕಂಡುಬಂದ ಹಿನ್ನೆಲೆಯಲ್ಲಿ ಗುಡ್ಡದ ಮೇಲೆ ಕಾಳಿ ಶಕ್ತಿಯನ್ನು ಆರಾಧಿಸಿದ್ದು
ನಂತರದ ರಾಜಾಡಳಿತದಲ್ಲಿ ಇಲ್ಲಿ ಶಿವಾಲಯ ನಿರ್ಮಾಣವಾಗಿ ಪೂಜಾದಿಗಳು ನಡೆಯುತ್ತಿದ್ದವು, ನಂತರದ ಒಂದು ಕಾಲಘಟ್ಟ ದಲ್ಲಿ ಸಹೋದರತೆಯ ಸ್ವಂತಿಕೆಯ ಸಂಘರ್ಷದ ವಿಚಾರದಲ್ಲಿ ನಡೆದ ಯುದ್ಧದ ಕಾರಣದಿಂದ ಶಿವಾಲಯಯವು ನಿರ್ಲಕ್ಷಿಸಲ್ಪಟ್ಟು ಶಿಥಿಲಾವಸ್ಥೆ ತಲುಪಿತು, ನಂತರ ಈ ಪ್ರದೇಶವು ಚೌಟ ಅರಸರ ಆಡಳಿತಕ್ಕೊಳಪಟ್ಟಾಗ, ಇಲ್ಲಿನ ಪವಿತ್ರ ಶಿವಲಿಂಗವನ್ನು ಮೂಡಬಿದ್ರಿ ಪುತ್ತಿಗೆಯಲ್ಲಿ ನಿರ್ಮಾಣಗೊಂಡ ಸೋಮನಾಥ ದೇವಾಲಯದಲ್ಲಿ ಪ್ರತಿಷ್ಠಾಪುಸಲಾಯಿತೆಂದು ದೇವಾಷ್ಟಮಂಗಳ ಮತ್ತು ಸ್ವರ್ಣಾರೂಡಾಷ್ಟ್ಟಮಂಗಳ ಪ್ರಶ್ನೆ ಯಲ್ಲಿ ಕಂಡುಬಂದಿದೆ.
38 ವರ್ಷಗಳ ಹಿಂದೆ ಇಲ್ಲಿನ ಜನರಿಗೆಸಂಕಷ್ಟಗಳು ಎದುರಾದಾಗ ಜೋತಿಷ್ಯ ಪ್ರಶ್ನೆ ಯಲ್ಲಿ ಇಲ್ಲಿನ ದೇವರಗುಡ್ಡೆ ಯಲ್ಲಿ ಶಿವಾಲಯದ ಕುರುಹುಗಳಿರುವ ವಿಚಾರ ಕಂಡುಬಂದ ಹಿನ್ನೆಲೆಯಲ್ಲಿ ಎಂ. ಕಾಂತಪ್ಪಶೆಟ್ಟಿಯವರು ಮತ್ತು ಮಿಜಾರು ಗುತ್ತು ಆನಂದ ಆಳ್ವ ರ ಮುಂದಾಳುತ್ವದಲ್ಲಿ ಇರುವೈಲು ಐ. ರಾಮ ಅಸ್ರಣ್ಣರ ಮಾರ್ಗದರ್ಶನದಲ್ಲಿ ದೇವಾಲಯ ನಿರ್ಮಾಣಗೊಂಡು ಬ್ರಹಮ್ಮಕಲಶೋತ್ಸವ ನಡೆದಿತ್ತು, ಇದೀಗ ಸ್ವರ್ಣಾರೂಡಅಷ್ಟಮಂಗಲದಲ್ಲಿ ದೇವಾಲಯವನ್ನು ಸಂಪೂರ್ಣ ಜೀರ್ಣೋದ್ದಾರಮಾಡಬೇಕು ಎಂದು ಸೂಚನೆ ಸಿಕ್ಕಿದ್ದು, ವಾಸ್ತುಶಿಲ್ಪಿ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯ ಆರಂಭಗೊಂಡಿದ್ದು,
ಜಗದೀಶ್ ಕುಳಾಲ್ ಪಾಕಜೆ ಯವರ ನಿರ್ಮಾಣ ಉಸ್ತುವಾರಿಯಲ್ಲಿ ಸುತ್ತುಪೌಳಿ ನಿರ್ಮಾಣ ಸಂಪೂರ್ಣ ಗೊಂಡಿದ್ದು,ಸುಮಾರು 1.10 ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ, 35 ಲಕ್ಷ ವೆಚ್ಚದಲ್ಲಿ ನಾಗರಕ್ತೇಶ್ವರಿ ಗುಡಿ, 30 ಲಕ್ಷ ವೆಚ್ಚದಲ್ಲಿ ರಾಜಗೋಪುರ ಹಾಗೂ ಕೊಡಮಣಿತ್ತಾಯ ದೈವದ ಗುಡಿ, ಅಗ್ರಸಭಾ ಗೋಪುರ ನಿರ್ಮಾಣಕಾರ್ಯ. ನಡೆಯಲಿದೆ ಈ ಮೂಲಕ ಸಾಂಬಸದಾಶಿವ ದೇವರಿಗೆ ಭವ್ಯ ದೇಗುಲ ನಿರ್ಮಾಣದಭಕ್ತರ ಆಶಯ ಈಡೇರಲಿದೆ.
ಭಕ್ತರ ಸಹಕಾರದಿಂದ ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದೆ, ಸುತ್ತುಪೌಳಿ ನಿರ್ಮಾಣ ಪೂರ್ಣವಾಗಿದೆ, ಮುಂದಿನ ಶಿವರಾತ್ರಿ ಮಹೋತ್ಸವದ ನಂತರ ಈಗಿನ ಗರ್ಭಗುಡಿ ತೆಗೆದು ನೂತನ ಶಿಲಾಮಯ ಗರ್ಭಗುಡಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಭಕ್ತರ ಸಹಕಾರದಿಂದ ಭವ್ಯವಾದ ದೇವಾಲಯ ನಿರ್ಮಾಣವಾಗಲಿದೆ.
ಸೋಮಶೇಖರ ಶೆಟ್ಟಿ ಉಳಿಪಾಡಿಗುತ್ತು. ಆಡಳಿತ ಮೊಕ್ತೇಸರರು.





