ಪೊಳಲಿ: ಸ್ವಾಮಿ ವಿವೇಕನಂದ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜ.12 ರಂದು ಭಾನುವಾರ ಅಚರಿಸಲಾಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಆರತಿ ಬೆಳಗಿಸಿ ಚಾಲನೆ ನೀಡಿದರು.
ಸ್ವಾಮಿ ವಿವೇಕಾನಂದರ ಟ್ಯಾಬ್ಲೋ ಮೆರವಣಿಗೆಯು ರಾಮಕೃಷ್ಣ ತಪೋವನದಿಂದ ಹೊರಟು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಥಬೀದಿಯಲ್ಲಿ ಸಾಗಿ ಸ್ವಾಮಿ ವಿವೇಕನಂದ ರಸ್ಥೆಯಲ್ಲಿ ಅಡ್ಡೂರು ಜಂಕ್ಷನ್ ವರೆಗೆ ಹೋಗಿ ರಾಮಕೃಷ್ಣ ತಪೋವನದಲ್ಲಿ ಸಮಾಪನಗೊಂಡಿತು. ತಪೋವನದಲ್ಲಿ ಶಾಲಾವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೇಗಳನ್ನು ಏರ್ಪಡಿಸಲಾಗಿತ್ತು.



